Uttara Kannada News: ಉತ್ತರ ಕನ್ನಡ: ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲಿ ಓರ್ವ ಸಾವನಪ್ಪಿ, ಮತ್ತೊಬ್ಬ ಗಂಭೀರ ಗಾಯಗ“ಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.
ಮುಂಡಗೋಡು ತಾಲೂಕಿನ ಕಲಕೋಪ್ಪ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮೃತ ವ್ಯಕ್ತಿ ಎಲ್ಲಪ್ಪ.ಎಸ್.ಕೊಡದ್ ಎಂದು ಗುರುತಿಸಲಾಗಿದ್ದು, ವಿಟ್ಟಲ್ ಎಸ್ ಚೋಳಪ್ಪನವರ್ ಗಾಯಾಳುವಾಗಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಬ್ಬರೂ ಹಾನಗಲ್ ತಾಲೂಕಿನ ಕೊಪ್ಪರಿಸಿಕೊಪ್ಪ ಗ್ರಾಮದವರಾಗಿದ್ದಾರೆ.
ಶಿರಸಿಯಿಂದ ಹಾನಗಲಿಗೆ ಪ್ರತಿನಿತ್ಯ ಟಿಪ್ಪರಗಳ ಓಡಾಟವಿದ್ದು, ಹಾನಗಲಿನಿಂದ ಪಾಳಾ ಮಾರ್ಗವಾಗಿ ಸಿರ್ಸಿಗೆ ಹೋಗುವ ಕಲ್ಲು ಗಣಿಗಾರಿಕೆ ಇಂದ ಜೆಲ್ಲಿ ತುಂಬಿಕೊಂಡು ಹೋಗುವ ಟಿಪ್ಪರ್ಗಳ ಹಾವಳಿ ಈ ಮಾರ್ಗದಲ್ಲಿ ಬಹಳ ಹೆಚ್ಚಾಗಿದೆ.
ಮುಂಡಗೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.




