Bollywood News: ನಟಿ ಸಾರಾ ಅಲಿ ಖಾನ್‌ಗೆ ಕೇದಾರನಾಥ, ಬದ್ರಿನಾಥಕ್ಕೆ ಪ್ರವೇಶವಿಲ್ಲ.

Bollywood News: ಬಾಲಿವುಡ್ ನಟಿ ಸಾರಾ ಅಲಿಖಾನ್ ಮುಸ್ಲಿಂ ಆದರೂ, ಅಮ್ಮನ ಜತೆ ಹಿಂದೂ ದೇವಸ್ಥಾನಕ್ಕೆ ಹೋಗಿ, ಭಕ್ತಿ ಮಾಡುತ್ತಾರೆ. ಏಕೆಂದರೆ ಸೈಫ್ ಅಲಿ ಖಾನ್ ಮುಸ್ಲಿಂ ಆದರೆ ಅಮ್ಮ ಹಿಂದೂ ಧರ್ಮದವರು, ಹಾಗಾಗಿ ಸಾರಾ ಎರಡೂ ಧರ್ಮವನ್ನು ಪಾಲಿಸುತ್ತಾರೆ.

ಅವರು ಭಾರತದ ಪ್ರಸಿದ್ಧ ಹಿಂದೂ ದೇವಸ್ಥಾನಗಳಿಗೂ ಭೇಟಿ ನೀಡುತ್ತಿದ್ದಾರೆ. ಕೇದಾರನಾಥ ಮತ್ತು ಭದ್ರಿನಾಥಕ್ಕೆ ಆಗಾಗ ಹೋಗುತ್ತಿರುತ್ತಾರೆ. ಹಣೆಗೆ ಭಂಡಾರ, ವಿಭೂತಿ ಹಚ್ಚಿ, ದೇವರ ಭಕ್ತಿ ಮಾಡಿ ಸಂಭ್ರಮಿಸುತ್ತಾರೆ. ಆದರೆ ಎಂದಿನಂತೆ ಇನ್ನು ಮುಂದೆ ಸಾರಾಗೆ ಭದ್ರಿನಾಥ ಮತ್ತು ಕೇದಾರನಾಥಕ್ಕೆ ಹೋಗುವುದು ಅಷ್ಟು ಸುಲಭವಲ್ಲ.

ಏಕೆಂದರೆ ದೇವಸ್ಥಾನದ ಆಡಳಿತ ಮಂಡಳಿ, ಹಿಂದೂಯೇತರ ವ್ಯಕ್ತಿಗಳು ಯಾರೇ ದೇವಸ್ಥಾನಕ್ಕೆ ಬರಬೇಕೆಂದರಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಬೇಕು ಎಂಬ ನಿಯಮ ತಂದಿದೆ. ಹಿಂದೂ ಧರ್ಮದಲ್ಲಿ ನಂಬಿಕೆ ಇದೆ. ಹಿಂದೂ ಧರ್ಮವನ್ನು ನಾನು ಪಾಲಿಸುತ್ತೇನೆ ಎಂದು ಅಫಿಡವಿಟ್ ನೀಡಿದರೆ ಮಾತ್ರ ಅಂಥವರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.

ಹಾಗಾಗಿ ಸಾರಾ ಅಲಿ ಖಾನ್ ಇನ್ಮುಂದೆ ಕೇದಾರನಾಥ ಮತ್ತು ಭದ್ರಿನಾಥಕ್ಕೆ ಹೋಗಬೇಕು ಎಂದಲ್ಲಿ, ಅಫಿಡವಿಟ್ ಸಲ್ಲಿಕೆ ಮಾಡಬೇಕು ಎಂದು ಹೇಳಲಾಗಿದೆ. 1 ತಿಂಗಳ ಹಿಂದೆ ಸಾರಾ ಕೇದಾರನಾಥಕ್ಕೆ ಹೋಗಿ ಶಿವನ ದರ್ಶನ ಮಾಡಿದ್ದರು. ಶಿವರಾತ್ರಿ ಆಚರಿಸಿದ್ದರು. ಇದೀಗ ಸಾರಾ ಅಫಿಡವಿಟ್ ಬರೆದು ಕೋಡ್ತಾರಾ ಕಾದು ನೋಡಬೇಕಿದೆ.

About The Author