Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಬಂದು 10ನೇಕ್ಲಾಸ್ ಪರೀಕ್ಷೆ ಬರೆದಿದ್ದಾಳೆ.
ಕೋಲಾರದಲ್ಲಿ ಈ ಘಟನೆ ನಡೆದಿದ್ದು, ಕೆಜಿಎಫ್ ತಾಲೂಕಿನ ಚಿನ್ನ ನಾಗನಹಳ್ಳಿ ನಿವಾಸಿಯಾದ 16 ವರ್ಷದ ಕುಸುಮಾ ಹೀಗೆ ಪರೀಕ್ಷೆ ಬರೆದ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಸೆಂಟ್ ಮೆರೀಸ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಕಾಲು ಕಳೆದುಕ“ಂಡಿದ್ದಾಳೆ. ಈಗಾಗಲೆ ಈಕೆಗೆ ಚಿಕಿತ್ಸೆ ನಡೆಯುತ್ತಿದ್ದು ಎರಡು ಶಸ್ತ್ರಚಿಕಿತ್ಸೆ ಬಾಕಿ ಇದೆ.
ಆದರೂ ಈ ಬಾಲಕಿ ಸ್ಟ್ರೆಚರ್ ಸಹಾಯದಿಂದ ಶಾಲೆಗೆ ಬಂದು ಮಲಗಿಯೇ ಪರೀಕ್ಷೆ ಬರೆದಿದ್ದಾಳೆ. ಈಕೆಯ ಈ ಪ್ರಯತ್ನಕ್ಕೆ, ಧೈರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಯನ್ನೇ ಗೋಳು ಎಂದು ಅಳುತ್ತ ಸಮಯ ವ್ಯರ್ಥ ಮಾಡುವಂಥವರಿಗೆ, ಈ ಕುಸುಮಾ ಮದರಿಯಾಗಿದ್ದಾಳೆ.




