‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರೀ ಅಬ್ಬರ ಮಾಡುತ್ತಿದೆ. ಕೇವಲ ನಾಲ್ಕು ದಿನಗಳಲ್ಲಿ ಸುಮಾರು 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಚಿತ್ರ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಈ ನಡುವೆ, ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಜೊತೆಗೆ ‘ಧುರಂಧರ್ 2’ ಕ್ಲ್ಯಾಶ್ ಆಗುತ್ತಿತ್ತು ಎಂಬ ಚರ್ಚೆಗಳು ಮೊದಲು ನಡೆದಿದ್ದವು. ಆದರೆ ‘ಟಾಕ್ಸಿಕ್’ ತಂಡ ತಮ್ಮ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿತ್ತು.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ‘ಧುರಂಧರ್ 3’ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ. ಈ ಪೋಸ್ಟ್ ನೋಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
‘ಧುರಂಧರ್’ ಸಿನಿಮಾ ಕ್ಲೈಮ್ಯಾಕ್ಸ್ ಅಲ್ಲಿ, ‘ಧುರಂಧರ್ 2’ ಸಿನಿಮಾ ಮಾರ್ಚ್ 19ಕ್ಕೆ ಬರಲಿದೆ ಎಂಬುದರ ಸ್ಪಷ್ಟ ಮಾಹಿತಿ ನೀಡಲಾಯಿತು. ಅದೇ ರೀತಿ, ‘ಧುರಂಧರ್ 2’ ಸಿನಮಾ ಯಶಸ್ಸಿನ ಬಳಿಕ ‘ಧುರಂಧರ್ 3’ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಕ್ಲೈಮ್ಯಾಕ್ಸ್ ಅಲ್ಲಿ ಆ ರೀತಿಯ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದಾಗ್ಯೂ ‘ಧುರಂಧರ್ 3’ ಜೂನ್ 14ರಂದು ಬರಲಿದೆ ಎಂಬ ಪೋಸ್ಟ್ ವೈರಲ್ ಮಾಡಿದ್ದಾರೆ.
ಈ ಪೋಸ್ಟರ್ ಯಾರೋ ಉದ್ದೇಶಪೂರ್ವಕವಾಗಿ ಕ್ರಿಯೇಟ್ ಮಾಡಿರೋದು ಅನ್ನೋದು ಸ್ಪಷ್ಟವಾಗಿದೆ. ‘ಧುರಂಧರ್ 3’ ಸಿನಿಮಾ ಮುಂದಿನ ದಿನಗಳಲ್ಲಿ ಬರಬಹುದು ಎಂಬ ಊಹೆ ಇದೆಯೇ ಹೊರತು, ಸಿನಿಮಾ ರಿಲೀಸ್ ಆಗೋದನ್ನು ಯಾರೂ ಅಧಿಕೃತ ಮಾಡಿಲ್ಲ. ‘ಟಾಕ್ಸಿಕ್’ ಸಿನಿಮಾ ರಿಲೀಸ್ಗಾಗಿ ಕಾಯುತ್ತಿರುವವರಿಗೆ ಭಯಬೀಳಿಸಬೇಕು ಎಂಬುದಷ್ಟೇ ಈ ಪೋಸ್ಟರ್ನ ಉದ್ದೇಶ. ಹೀಗಾಗಿ, ಈ ಪೋಸ್ಟರ್ನಲ್ಲಿ ಯಾವುದೇ ಸತ್ಯ ಇಲ್ಲ.
‘ಟಾಕ್ಸಿಕ್’ ಸಿನಿಮಾಗೆ ಯಶ್ ಹೀರೋ. ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಜೂನ್ 4ರಂದು ತೆರೆಗೆ ಬರಲಿದೆ. ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿ ಅಬ್ಬರಿಸಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬ ಕುತೂಹಲ ಮೂಡಿದೆ.
ವರದಿ : ಲಾವಣ್ಯ ಅನಿಗೋಳ




