ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ: ಯತ್ನಾಳ್ – ಅನಂತ್ ಕುಮಾರ್ ಹೆಗಡೆಯಿಂದ ಉದ್ಘಾಟನೆ

Mandya News: ಮಂಡ್ಯದ ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳ್ ಮತ್ತು ಅನಂತ್ ಕುಮಾರ್ ಹೆಗ್ಡೆ ಚಾಲನೆ ನೀಡಿದ್ದಾರೆ.

ಇನ್ನು ಕಾರ್ಯಕ್ರಮವನ್ನು ಉದ್ಘಾಟಿಸಿದ ಯತ್ನಾಳ್ ಮತ್ತು ಹೆಗಡೆಯವರಿಗೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ, ಅದ್ಧೂರಿ ಸ್ವಾಗತ ಕೋರಿದರು. ಬಳಿಕ ಯತ್ನಾಳ್ ಮತ್ತು ಹೆಗಡೆ ಸೇರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜಾಥಾಗೆ ಚಾಲನೆ ನೀಡಿದರು. ಬಳಿಕ ಸಾವಿರಾರು ಹಿಂದೂ ಕಾರ್ಯಕರ್ತರು ಜಾಥಾದೊಂದಿಗೆ ಮೆರವಣಿಗೆ ಸಾಗಿದರು.

ಬಳಿಕ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳು ವೇದಿಕೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ  ಹಲವಾರು ಹಿಂದೂ ಕಾರ್ಯಕರ್ತರು ಾಭಾಗವಹಿಸಿದ್ದರು.

About The Author