Uttara Pradesh: ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿ, ಮನೆ ಕುಸಿದು ಅಣ್ಣ ತಂಗಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ವಾರಣಾಸಿಯ ಲಹರ್ತಾರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಅಮನ್ ಚೌಧರಿ ಮತ್ತು 28 ವರ್ಷದ ಪ್ರೀತಿ ಸಾವನ್ನಪ್ಪಿದ್ದಾರೆ. ಮನೆ ಕುಸಿದ ಪರಿಣಾಮ ಮನೆಯಲ್ಲಿದ್ದ ವೃದ್ಧೆ ಗಿರಿಜಾ ದೇವಿ, ಮತ್ತು ಆಕೆಯ ಇಬ್ಬರು ಪುತ್ರ ಮತ್ತು ಓರ್ವ ಪುತ್ರಿ ಮನೆಯ ಅವಶೇಷಗಳಡಿ ಸಿಲುಕಿದ್ದರು.
ಅಗ್ನಿಶಾಮಕ ದಳ, ಪೋಲೀಸರು ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಆಚೆ ತೆಗೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ, ಅಣ್ಣ ತಂಗಿ ಸಾವನ್ನಪ್ಪಿದ್ದು, ವೃದ್ಧೆ ಮತ್ತು ಆಕೆಯ ಇನ್ನೋರ್ವ ಪುತ್ರನ ಸ್ಥಿತಿ ಗಂಭೀರವಾಗಿದೆ.
ರಾತ್ರಿ ಇಡೀ ಗ್ಯಾಸ್ ಲೀಕಾಗಿದ್ದು, ಬೆಳಿಗ್ಗೆ ಗಿರೀಜಾ ದೇವಿ ಅಡುಗೆ ಮಾಡಲು ಹೋದಾಗ, ಸ್ಪೋಟ ಸಂಭವಿಸಿದೆ. ಪರಿಣಾಮವಾಗಿ ಗಿರೀಜಾ ದೇವಿಯವರ ಮನೆ ಅಲ್ಲದೇ, ಅಕ್ಕಪಕ್ಕದ ಮನೆಗೂ ಬಿರುಕು ಬಿಟ್ಟಿದೆ.




