Political News: ಪಕ್ಷದ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಲು ನಿಮ್ಮ ಸಹಕಾರ ಅಗತ್ಯ: ನಿಖಿಲ್ ಕುಮಾರ್

Political Newsಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯ ಸಂತೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ_ಜನತಾದಳ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನವನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಹೆಚ್.ಡಿ ಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಹುಲಿ ದಾಳಿ ಹಾಗೂ ಮಾನವ ಹಾಗೂ ವನ್ಯ ಜೀವಿಗಳು ಸಂಘರ್ಷವನ್ನ ತಡೆಗಟ್ಟಲು ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ, ಬೇಜವಾಬ್ದಾರಿ ತೋರಿದ ಕ್ರಮವನ್ನು ನಿಖಿಲ್ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಸಚಿವರಾದ ಕುಮಾರಣ್ಣನವರು ಕೇಂದ್ರ ಅರಣ್ಯ ಸಚಿವರೊಂದಿಗೆ ಈ ವಿಷಯವಾಗಿ ಚರ್ಚಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ನಿಖಿಲ್ ಒತ್ತಾಯಿಸಿದ್ದಾರೆ.

ಅಲ್ಲದೇ, ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಹಗರಣಗಳು, ಗಂಗಾ ಕಲ್ಯಾಣ ಯೋಜನೆ ಅಡಿ ಬೋರವೆಲ್ ನೀಡದಿರುವುದು, ಟಿ.ಸಿ. ಕನೆಕ್ಷನ್, ಹೆಚ್.ಡಿ. ಕೋಟೆಯ ತಾರಕ್ ಜಲಾಶಯ ಹಾಗೂ ನೀರಾವರಿ ಕಾಲುವೆಗಳ ಆಧುನೀಕರಣ ವಿಳಂಬದ ಬಗ್ಗೆ ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕುಮಾರಣ್ಣನವರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು. ಜೊತೆಗೆ ಕಾರ್ಯಕರ್ತರ ಚುನಾವಣೆಗೆ ನಾವೆಲ್ಲರೂ ಒಗ್ಗೂಡಿ ದುಡಿಯೋಣ ಎಂದು ತಿಳಿಸಿ, ಪಕ್ಷದ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಲು ನಿಖಿಲ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಸಾ. ರಾ. ಮಹೇಶ್ ಅವರು, ಹುಣಸೂರು ಶಾಸಕರಾದ ಶ್ರೀ ಜಿ.ಡಿ. ಹರೀಶ್ ಗೌಡ ಅವರು, ಮಾಜಿ ಶಾಸಕರು ಹಾಗೂ ಮೈಸೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಅಶ್ವಿನ್ ಕುಮಾರ್ ಅವರು, ಮಾಜಿ ಶಾಸಕರಾದ ಶ್ರೀ ಕೆ. ಮಹದೇವ್ ಅವರು, ಮೈಸೂರು ನಗರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್ ಬಿಎಂ ಮಂಜು ಅವರು, ಮೈಮುಲ್ ಮಾಜಿ ಅಧ್ಯಕ್ಷರಾದ ಶ್ರೀ ಪ್ರಸನ್ ಕುಮಾರ್ ಅವರು, ಮುಖಂಡರಾದ ಶ್ರೀ ರಾಜೇಗೌಡ ಅವರು, ಶ್ರೀ ಹರೀಶ್ ಅವರು , ಶ್ರೀ ನರಸಿಂಮೇಗೌಡ ಅವರು, ಶ್ರೀ ಶಾಂತಣ್ಣ ಅವರು, ಶ್ರೀ ಸಿದ್ದೇಗೌಡ ಅವರು, ಶ್ರೀ ಸೋಮಣ್ಣ ಅವರು, ಶ್ರೀ ಜಿ. ಗೋಪಾಲಸ್ವಾಮಿ ಅವರು, ಶ್ರೀಮತಿ ಗಾಯತ್ರಿ ಅವರು, ಶ್ರೀಮತಿ ಸವಿತಾ ಅವರು ಸೇರಿದಂತೆ ಸ್ಥಳೀಯ ನಾಯಕರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

About The Author