Mandya: ವಿದ್ಯುತ್ ಪ್ರವಹಿಸಿ, ಕಂಬದ ಮೇಲೆ ಪ್ರಾಣ ಬಿಟ್ಟ ಲೈನ್ ಮ್ಯಾನ್..

Mandya News: ಶಾಕ್ ತಾಕಿ ಲೈನ್ ಮ್ಯಾನ್ ಕಂಬದ ಮೇಲೆ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.

ಮಲ್ಲಿಗೆರೆ ಗ್ರಾಮದ 55 ವರ್ಷದ ವಿಶ್ವ ಎಂಬಾತ ಮೃತ ಲೈನ್‌ ಮ್ಯಾನ್ ಆಗಿದ್ದು, ಈತ ಗುತ್ತಿಗೆದಾರನ ಬಳಿ ಲೈನ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ದ. ಇಂದು ವಿದ್ಯುತ್ ಕಂಬದ ಮೇಲೆ ಕೆಲಸ ಮಾಡ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ವಿಶ್ವ ಸಾವನ್ನಪ್ಪಿದ್ದಾನೆ.

ಇನ್ನು ಆತನ ಕಳೆಬರಹ ಕಂಬದ ಮೇಲೆ ನೇತಾಡಿದ್ದು ಕಂಡು ಜನರು ಆತಂಕರಾಗಿದ್ದು, ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

About The Author