Political News: ಕೆಆರ್ಎಸ್ ಪಕ್ಷ ಸ್ಥಾಪಿಸಿರುವ, ಎಎಪಿ ಮಾಜಿ ನಾಯಕ ರವಿಕೃಷ್ಣಾ ರೆಡ್ಡಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ರವಿಕೃಷ್ಣಾ ರೆಡ್ಡಿಯವರು ತಮ್ಮ ಟೀಶರ್ಟ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಪಕ್ಷಗಳ ಶಾಲು, ವಸ್ತ್ರ ಇತ್ಯಾದಿ ಎಲ್ಲ ಕಡೆ ಸಿಗುತ್ತದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ಎಲ್ಲ ಪಕ್ಷಗಳ ಶಾಲು, ವಸ್ತ್ರ ಸಿಗತ್ತೆ. ಆದರೆ ಕೆಆರ್ಎಸ್ ಟೀ ಶರ್ಟ್ನಾ ಯಾರೂ ಶೋಕಿಗೆ ಹಾಕಿ ತಿರುಗುವಂತಿಲ್ಲ. ಮತ್ತು ಅದು ಅಷ್ಟು ಸುಲಭವಾಗಿ ಸಿಗುವುದೂ ಇಲ್ಲ ಅಂತಾ ರವಿಕೃಷ್ಣ.
ಈ ಟೀ ಶರ್ಟ್ ಬೇಕಾದವರು 100 ರೂ. ನೀಡಿ ಸದಸ್ಯತ್ವ ಪಡೆದು, ಕಚೇರಿಯಿಂದಲೇ ಟೀ ಶರ್ಟ್ ಪಡೆಯಬೇಕು. ವಿಶೇಷ ಅಂದ್ರೆ 100 ರೂ., 200 ರೂ., 350 ರೂ. ಹೀಗೆ ಬೇರೆ ಬೇರೆ ವಿಧದ ಟೀ ಶರ್ಟ್ಗಳಿದೆ. ಈ ಶರ್ಟ್ ಹಾಕಿ, ಭ್ರಷ್ಟಾಚಾರಿಗಳ ಚಳಿ ಬಿಡಿಸಬಹುದು. ಲಂಚಪಡೆಯುವವರಿಗೆ ಹೆದರಿಕೆಯೂ ಇಡಬಹುದು.
ಇನ್ನು ತಮ್ಮ ಪಕ್ಷದ ಪವರ್ ಬಗ್ಗೆ ಮಾತನಾಡಿರುವ ರವಿಕೃಷ್ಣಾ, 1 ಕಥೆ ಹೇಳಿದ್ದಾರೆ. ಈ ಮುಂಚೆ ಅನುಸ್ವಾಮಿ ಎಂಬ ವ್ಯಕ್ತಿಯ ಬಗ್ಗೆ ಅಗೌರವ ತೋರುತ್ತಿದ್ದರು. ಪೋಲೀಸ್ ಭಾಷೆಯಲ್ಲೇ ಪೋಲೀಸರು ಮಾತನಾಡಿಸುತ್ತಿದ್ದರು. ಆದರೆ ಕೆಆರ್ಎಸ್ ಪಕ್ಷಕ್ಕೆ ಸೇರಿ, ಆ ವಸ್ತ್ರ ಧರಿಸಿದ ಬಳಿಕ ಪೋಲೀಸರು ಕೂಡ ಬನ್ನಿ ಸರ್ ಎಂದು ಮಾತನಾಡಿಸುತ್ತಾರಂತೆ.




