Political News: ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ರಾಜಕಾರಣಿಗಳು ಸ್ವಲ್ಪ ಸಮಯವನ್ನಾದರೂ ಅವರ ಫ್ಯಾಮಿಲಿ ನೀಡು್ತ್ತಾರೆ. ನಮ್ಮ ರಾಜ್ಯದಲ್ಲೇ ನಾವು ಅಂಥ ಉದಾಹರಣೆಗಳನ್ನು ನೋಡಿದ್ದೇವೆ. ಡಿಕೆಶಿ, ಪ್ರಹ್ಲಾದ್ ಜೋಶಿ, ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಗೌಡ, ಹೀಗೆ ಅನೇಕರು ಸ್ವಲ್ಪ ಸಮಯವನ್ನು ಪತ್ನಿ-ಮಕ್ಕಳಿಗೆ ನೀಡಿ, ಕಾಲ ಕಳೆಯುತ್ತಾರೆ.
ಅದೇ ರೀತಿ ಇದೀಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಮ್ಮ ಮೊಮ್ಮಗನಿಗಾಗಿ ಸ್ವಲ್ಪ ಸಮಯ ಮೀಸಲಿರಿಸಿ, ಪೂರಿ ಮಾಡಿದ್ದಾರೆ. ಮೊಮ್ಮಗನಿಗೆ ಪೂರಿ ತಿನ್ನಲು ಆಸೆಯಾಗಿದ್ದು, ಆತ ಅಜ್ಜನ ಬಳಿ ಬಂದು ತನಗೆ ಪೂರಿ ಮಾಡಿಕ“ಡಿ ಎಂದು ಕೇಳಿದ್ದಾನಂತೆ. ಹಾಗಾಗಿ ರೇವಂತ್ ರೆಡ್ಡಿ ಪೂರಿ ಮಾಡಿದ್ದಾರೆ.
ಈ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿರುವ ರೇವಂತ್ ರೆಡ್ಡಿ, ಡ್ಯಾಡ್ ನೀವು ಪೂರಿ ಮಾಡಿದರೆ ಮಾತ್ರ ನಾನು ತಿನ್ನುತ್ತೇನೆ ಎಂದು ಮೊಮ್ಮಗ ಕೇಳಿದರೇನಾದ್ರೂ ತಪ್ಪಾ..? ಸಾರ್ವಜನಿಕ ಜೀವನದ ಬ್ಯುಸಿ ಗುಂಗುಗಳಲ್ಲಿ.. ಮೊಮ್ಮಗನೊಂದಿಗೆ ಒಟ್ಟಿಗೆ ಪೂರಿ ಮಾಡುವ ಈ ಕೆಲವು ಕ್ಷಣಗಳು, ಸಿಹಿ ನೆನಪುಗಳು.. ಎಂದು ರೇವಂತ್ ರೆಡ್ಡಿ ಬರೆದಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾತ ಮೊಮ್ಮಗನ ಬಾಂಧ್ಯವ ನೋಡಿ ಖುಷಿ ಪಟ್ಟಿದ್ದಾರೆ. ಅಲ್ಲದೇ ಈ ಎಂಗ್ ಸಿಎಂಗೆ ಮೊಮ್ಮಗ ಇದ್ದಾನಾ ಅಂತಾ ಆಶ್ಚರ್ಯಾ ಆಗಿದ್ದಾರೆ.
"తాత.. నువ్వు పూరీలు వేస్తేనే తింటా" అని మనవడు అడిగితే తప్పుతుందా?
పక్కన మనవడు, చేతిలో పిడికెడు పిండి, దోసిట్లో నవ్వులు, గుండ్రంగా లేని డజన్ పూరీలు…
బిజీ బిజీగా సాగుతున్న ప్రజా జీవితంలో.. మనవడితో కలిసి పూరీలు వేస్తూ గడిపిన ఈ కొన్ని క్షణాలు, మధుర జ్ఞాపకాలు..#Family pic.twitter.com/TXDbufWCdY
— Revanth Reddy (@revanth_anumula) July 9, 2026




