News: ಖ್ಯಾತ ಹಿಂದಿ ವ್ಲಾಗರ್ ಆಗಿರುವ ಕನ್ನಿಕಾ ಶರ್ಮಾ ಮತ್ತು ಸಾಕೀಬ್ ಸೈಫಿ ವಿವಾಹವಾಗಿದ್ದಾರೆ. ಹಲವು ದಿನಗಳಿಂದ ಇವರಿಬ್ಬರೂ ಮದುವೆಯಾಗುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಗ ಹಲವರು ಇವರ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದು ಲವ್ ಜಿಹಾದ್. ವಿವಾಹದ ಬಳಿಕ ಈಕೆಯ ಜೀವನವೂ ಹಾಳಾಗಲಿದೆ ಎಂದು ಹಲವರು ಹೇಳಿದ್ದರು.
ಕೆಲ ದಿನಗಳ ಹಿಂದೆ ಈಕೆ ರಂಜಾನ್ ರೋಜಾ ಮಾಡಿದಾಗ, ಈಕೆಯ ಮನೆಯ ಬಳಿ ಹೋದ ಕೆಲ ಹಿಂದೂಗಳು, ನೀನು ಬ್ರಾಹ್ಮಣರ ಮನೆಯವಳು. ನೀನು ಹೀಗೆಲ್ಲ ಮಾಡುವುದು ಸರಿಯಲ್ಲ ಎಂದಿದ್ದರು. ಆದರೆ ಯಾರ ಮಾತಿಗೂ ಕಿವಿಗ“ಡದ ಕನ್ನಿಕಾ, ಬಹುಕಾಲದ ಗೆಳೆಯ ಸಾಕೀಬ್ ಜತೆ ವಿವಾಹವಾಗಿದ್ದಾರೆ.
ಬ್ರಾಹ್ಮಣ ಹಿಂದೂ ಸಂಪ್ರದಾಯದಂತೆ ವಿವಾಹ ಮತ್ತು ಮುಸ್ಲಿಂ ಸಂಪ್ರದಾಯದಂತೆ ನಿಖಾ ನಡೆದಿದ್ದು, ಇವರ ಫ್ಯಾನ್ಸ್ ಇವರಿಗೆ ಶುಭ ಕೋರಿದ್ದಾರೆ.




