Tumakuru: ನಾಳೆ ತುಮಕೂರಿಗೆ ರಾಷ್ಟ್ರಪತಿ ಭೇಟಿ ಹಿನ್ನೆಲೆ: ನಗದಾದ್ಯಂತ ಹೈ ಅಲರ್ಟ್..

Tumakuru News: ತುಮಕೂರು: ನಾಳೆ ತುಮಕೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದು, ತುಮಕೂರಿನಾಾದ್ಯಂತ ಹೈ ಅಲರ್ಟ್ ಮಾಡಲಾಗಿದೆ.

ನಾಳೆ ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮಿಜಿಗಳ ೧೧೯ನೇ ಜನ್ಮದಿನೋತ್ಸವ ಹಿನ್ನೆಲೆ, ಈ ಕಾರ್ಯಕ್ರಮದಲ್ಲಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ. ಹಾಗಾಗಿ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಎಸ್ಪಿ ಅಶೋಕ್ ಅವರು, ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಬಂದೊಬಸ್ತ್ ಮಾಡಲಾಗಿದೆ. ಭದ್ರತೆಯಲ್ಲಿ ೧೫೦೦ ಸಿಬ್ಬಂದಿಗಳ ನಿಯೋಜಿಸಲಾಗಿದೆ. ಮಾನ್ಯರು ಬೆಳಿಗ್ಗೆ ಎಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗಲಿದ್ದಾರೆ. ಅಲ್ಲಿಂದ ಸಿದ್ದಗಂಗಾ ಮಠಕ್ಕೆ ತೆರಳಿ ಕಾರ್ಯಕ್ರಮ ಮುಗಿಸಿಕೊಂಡು ಬಂದ ಎಲಿಕ್ಯಾಪ್ಟರ್ ಮುಖಾಂತರವೇ ವಾಪಾಸ್ ಆಗಲಿದ್ದಾರೆ ಎಂದರು.

ಸಾರ್ವಜನಿಕರ ಗಮನಕ್ಕೆ ನಾಳೆ ಬೆಳಿಗ್ಗೆ 10 ರಿಂದ 11 ರ ಮಧ್ಯೆ, ಮಧ್ಯಾಹ್ನ 11:30ರಿಂದ 12:30ರ ಮಧ್ಯದಲ್ಲಿ ಟ್ರಾಫಿಕ್ ರಿಸ್ಟ್ರಿಕ್ಷನ್ಸ್ ಇರಲಿದೆ. ಸಾರ್ವಜನಿಕರು ಸಹಕರಿಸಬೇಕು. ಈ ವೇಳೆ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಬೇಕು. ಮಠದ ಹಿಂದಿನ ಬಂಡೆಪಾಳ್ಯ ಗೇಟ್ ನಲ್ಲಿ ಸಾರ್ವಜನಿಕರ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ..
ಮುಖ್ಯದ್ವಾರದಲ್ಲಿ ಬೆಳಿಗ್ಗೆ ೯ ಗಂಟೆ ವರೆಗೂ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಇರಲಿದೆ ಎಂದಿದ್ದಾರೆ.

ಅದರ ಜೊತೆ ಪ್ರದರ್ಶನಾಲಯ ಮೈದಾನದ ಬಳಿ ಸಹ ಗೇಟ್ ಇದೆ, ಅದನ್ನು ಸಹ ಸಾರ್ವಜನಿಕರು ಬಳಸಬಹುದಾಗಿದೆ. ಸಾರ್ವಜನಿಕರು ಸಹಕರಿಸಬೇಕು. ದೊಡ್ಡ ದೊಡ್ಡ ಬ್ಯಾಗ್ ಗಳು, ನಿಷೇಧಿತ ವಸ್ತುಗಳನ್ನು ತರಬಾರದು. ರಾಷ್ಟ್ರಪತಿಗಳ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಗದ್ದುಗೆ ಬಳಿ ಬಂದು ಪೂಜೆ ಮಾಡಿ, ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೆರಳಲಿದ್ದಾರೆ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.

About The Author