Mandya: ಸಾ*ವಿನಲ್ಲಿ ಅಂತ್ಯವಾದ ತಾಯಿ-ಮಗನ ನಡುವಿನ ಜಗಳ..

Mandya News: ತಾಯಿ-ಮಗನ ನಡುವೆ ಜಗಳ ನಡೆದು, ಸಾವಿನಲ್ಲಿ ಅಂತ್ಯವಾದ ಘೋರ ದುರಂತ ಮಂಡ್ಯದಲ್ಲಿ ಸಂಭವಿಸಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮಹದೇವಮ್ಮ(75), ಸುಭಾಷ್ (42) ಸಾವಿನಪ್ಪಿದ ತಾಯಿ ಮಗ.

ನಡೆದಿದ್ದೇನು ಎಂದು ನೋಡೋದಾದ್ರೆ, ಪುತ್ರ ಸುಭಾಷ್ ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.
ಇದರಿಂದ ಬೇಸತ್ತ ತಾಯಿ ಮಾದೇವಮ್ಮ ಮನನೊಂದು15 ದಿನಗಳ ಹಿಂದೆ ಮನೆ ಬಿಟ್ಟು ನಾಪತ್ತೆಯಾಗಿದ್ದಳು.

ತಾಯಿ ನಾಪತ್ತೆಯಿಂದ ಭಯಗೊಂಡು ಮಂಗಳವಾರ ಮಗ ಸುಭಾಷ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಇಂದು ಕಬ್ಬಿನ ಗದ್ದೆಯಲ್ಲಿ ಮಾದೇವಮ್ಮನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆ.ಆರ್.ಪೇಟೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

About The Author