Bidar: ರಸ್ತೆ ಕಸ ಗುಡಿಸುತ್ತಿದ್ದ ಮಹಿಳೆಯ ಮೇಲೆ ಹರಿದ ಪೊಲೀಸ್ ಪೇದೆಯ ಕಾರು, ಗಂಭೀರ ಗಾಯ

Bidar News: ಬೀದ‌ರ್: ರಭಸವಾಗಿ ಬಂದ ಪೊಲೀಸ್ ಪೇದೆಯ ಕಾರು ರಸ್ತೆ ಗುಡಿಸುತ್ತಿದ್ದ ಮಹಿಳೆಯ ಮೇಲೆ ಹರಿದು, ಮಹಿಳೆಗೆ ಗಾಯಗೊಂಡ ಘಟನೆ ಭಾಲ್ಕಿ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಜ್ಞಾನಾಬಾಯಿ (55) ಗಾಯಗೊಂಡ ಮಹಿಳೆ. ಮೆಹಕರ್‌ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಪೇದೆ ಉಮಾಕಾಂತ್ ಅವರ ಕಾರು ಮಹಿಳೆಯ ಮೇಲೆ ಹರಿದಿದೆ.

ಶುಕ್ರವಾರ ಬೆಳಿಗ್ಗೆ ಭಾಲ್ಕಿಯ ಚಿನ್ನದ ಅಂಗಡಿ ಮುಂದೆ ಜ್ಞಾನಾಬಾಯಿ ರಸ್ತೆ ಗುಡಿಸುತ್ತಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಪೊಲೀಸ್ ಪೇದೆಯ ಕಾರು ಆ ಮಹಿಳೆಯ ಮೇಲಿಂದಲೇ ಹತ್ತಿಕೊಂಡು ಹೋಗಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆಯ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಬೀದರ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

About The Author