Mandya News: ಮಕ್ಕಳಿಗೆ ಈಗ ತಾನೇ ಪರೀಕ್ಷೆ ಮುಗಿದಿದ್ದು, ಮಕ್ಕಳು ರಜೆಯ ಮಜಾ ಪಡೆಯುತ್ತಿದ್ದಾರೆ. ಇನ್ನು ಕೂಡ ಮುಗಿದ ಪರೀಕ್ಷೆಯ ಫಲಿತಾಂಶ ಕೂಡ ಬರಲಿಲ್ಲ. ಆಗಲೇ ಜನ ತಮ್ಮ ಮಕ್ಕಳಿಗೆ ಮುಂದಿನ ತರಗತಿಗೆ ಎಡ್ಮಿಶನ್ ಮಾಡಿಸಲು ಸರ್ಕಸ್ ಮಾಡುತ್ತಿದ್ದಾರೆ.
ಮಂಡ್ಯದ ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಅಡ್ಮಿಷನ್ ಮಾಡಿಸಬೇಕು ಎಂದು ಪೋಷಕರು ರಾತ್ರಿಯೇ ಶಾಲೆಯ ಬಳಿ ಬಂದಿದ್ದು, ಚಾಪೆ ದಿಂಬು ಸಮೇತರಾಗಿ ಹಾಜರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಆಶೀರ್ವಾದ್ ಖಾಸಗಿ ಶಾಲೆ ಮುಂದೆ ಈ ದೃಶ್ಯ ಕಂಡುಬಂದಿದ್ದು, ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸಬೇಕು ಎಂದಿರುವ ಪೋಷಕರು, ಶಾಲೆಯ ಬಳಿ ರಾತ್ರಿಯೇ ಚಾಪೆ ದಿಂಬು ತಂದು, ಅಡ್ಮಿಷನ್‌ಗಾಗಿ ಕಾದು ಕುಳಿತಿದ್ದಾರೆ. ರಾತ್ರಿ ಮಲಗಿ, ಶಾಲೆ ಓಪನ್ ಆಗ್ತಿದ್ದಂತೆ ಅಡ್ಮಿಷನ್ ಮಾಡಿಸಿಯೇಬಿಡಬೇಕು ಎಂಬ ಕಾತುರದಲ್ಲಿದ್ದಾರೆ.
ಎಲ್‌ಕೆಜಿಗೆ ಮಕ್ಕಳನ್ನು ಈ ಶಾಲೆಗೆ ಸೇರಿಸಬೇಕು ಎಂಬ ಕಾರಣಕ್ಕೆ, ಪೋಷಕರು ಈ ರೀತಿ ಸರ್ಕಸ್ ಮಾಡಿದ್ದು, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಂಥ ಪಾಡಿಗೂ ಸಿದ್ಧ ಆದಂತಿದ್ದಾರೆ.




