Political News: ಸಂಸದ ತೇಜಸ್ವಿ ಸೂರ್ಯ ಅವರು ಇಂದು ಹುಳಿಮಾವು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಈ ಸುಂದರ ಕ್ಷಣದ ಬಗ್ಗೆ ಮಾತನಾಡಿರುವ ಅವರು, ಭಾರತವು ಹಬ್ಬ – ಹರಿದಿನ, ಆಚರಣೆಗಳನ್ನು ಒಳಗೊಂಡಂತೆ ವರ್ಷಪೂರ್ತಿ ಖುಷಿ, ಸಂತೋಷಗಳೆಡೆಗೆ ನೂಕುವ ಸಂಭ್ರಮಗಳ ನೆಲೆಬೀಡು. ಸನಾತನ ಸಂಸ್ಕೃತಿಯ ಪ್ರತಿ ಹಬ್ಬವೂ ವಿಶೇಷತೆ ಹೊಂದಿದ್ದು, ಬದುಕಿಗೆ ನವ ಸಂಭ್ರಮ, ಚೈತನ್ಯವನ್ನು ತುಂಬುತ್ತದೆ ಎಂದಿದ್ದಾರೆ.

ಪುಟ್ಟ ಗುಡಿಯಿರಲಿ ಅಥವಾ ದೊಡ್ಡ ದೇಗುಲವಿರಲಿ, ವರ್ಷಪೂರ್ತಿ ಎಲ್ಲೋ ಒಂದು ಕಡೆ ನಡೆಯುವ ಈ ಆಚರಣೆಗಳೇ ನಮ್ಮ ಜೀವನದ ಅವಿಭಾಜ್ಯ ಅಂಗ. ಹಬ್ಬದ ನೆಪದಲ್ಲಿ ನಡೆಯುವ ಸಂಗೀತ, ನೃತ್ಯ, ಆಚರಣೆ, ಅನ್ನ ಸಂತರ್ಪಣೆ, ಒಗ್ಗೂಡುವಿಕೆ ನಮ್ಮ ಬದುಕಿನಲ್ಲಿ ಉಲ್ಲಾಸ, ಚೈತನ್ಯವನ್ನು ತರುತ್ತವೆ.
ಇಂದು ಹುಳಿಮಾವು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಸಾವಿರಾರು ಭಕ್ತರ ಭಕ್ತಿ ಮತ್ತು ಸಂಭ್ರಮದ ನಡುವೆ ಪಾಲ್ಗೊಂಡಿದ್ದು ಮನಸ್ಸಿಗೆ ನೆಮ್ಮದಿ ನೀಡಿತು. ಈ ದೈವಿಕ ಕ್ಷಣಗಳಲ್ಲಿ ಅನ್ನದಾನದಂತಹ ಪುಣ್ಯ ಕಾರ್ಯಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.




