Mandya: ಗೋ ಶಾಲೆಗೆ ನುಗ್ಗಿ ಹಸುವನ್ನು ಕೊಂ*ದ ಚಿರತೆ: ಗ್ರಾಮಸ್ಥರಲ್ಲಿ ಮೂಡಿದ ಆತಂಕ

Mandya News: ಚಿರತೆ ಗೋ ಶಾಲೆಗೆ ನುಗ್ಗಿ ಹಸುವನ್ನು ಎಳೆದು ಕೊಂದ ಮಾಡಿರುವ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ.

ಮೇಲುಕೋಟೆಯ ಶ್ರೀನಿವಾಸ್ ಅಯ್ಯಂಗಾರ್ ಎಂಬುವರು‌ ಈ ಗೋಶಾಲೆಯನ್ನು ನಡೆಸುತ್ತಿದ್ದರು. ಆದರೆ ಮಧ್ಯರಾತ್ರಿ ದಾಳಿ ಮಾಡಿರುವ ಚಿರತೆ, ಹಸುವನ್ನು ಎಳೆದು ತಂದು ಬಾಗಿಲಿನಲ್ಲಿ ಕೊಂದು ಹಾಕಿದೆ.

ಈ ವೇಳೆ ಚಿರತೆ ಬೇಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮನೆಯವರು ಚಿರತೆ ಮೇಲೆ ಟಾರ್ಚ್ ಬಿಟ್ಟು ಚಿರತೆ ಓಡಿಸುವ ಪ್ರಯತ್ನ ಮಾಡಿದ್ದಾರೆ. ಟಾರ್ಚ್ ಕಿರಿಕಿರಿಯಿಂದ ಚಿರತೆ ಹಸು ಬಿಟ್ಟು ಕಾಡಿಗೆ ತೆರಳಿದೆ.

ಇನ್ನು ಗ್ರಾಮಕ್ಕೆ ಚಿರತೆ ಬಂದ ಸುದ್ದಿ ಕೇಳಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಮೇಲುಕೋಟೆ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

About The Author