ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದೋಷಿ ತೀರ್ಪು ಪ್ರಕಟವಾದ ಬೆನ್ನಲ್ಲೇ, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.
ಶಿಕ್ಷೆಯ ಪ್ರಮಾಣ ಇನ್ನೂ ಪ್ರಕಟವಾಗುವ ಮುನ್ನವೇ, ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿವೆ. ಕೆಲವರು ಚುನಾವಣಾ ಆಯೋಗ ತಕ್ಷಣವೇ ಉಪಚುನಾವಣೆ ಘೋಷಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇನ್ನೂ ಕೆಲವರು, ಶಾಸಕ ಸ್ಥಾನದಿಂದ ಅನರ್ಹತೆ ಉಂಟಾದ ಬಳಿಕವೂ ಅದೇ ಕುಟುಂಬಕ್ಕೆ ಟಿಕೆಟ್ ನೀಡಿದರೆ, ಜಾತಿ ಮತ್ತು ಹಣಬಲ ಹೊಂದಿರುವವರಿಗೆ ಯಾವುದೇ ಪ್ರಕರಣ ಬಂದರೂ ರಾಜಕೀಯ ಅವಕಾಶ ಸಿಗುತ್ತದೆ ಎಂಬ ಸಂದೇಶ ಹೋಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಕ್ಷೆಯ ಪ್ರಮಾಣ ಅಧಿಕೃತವಾಗಿ ಪ್ರಕಟವಾಗುವ ಮೊದಲೇ ಉಪಚುನಾವಣೆ ಕುರಿತ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರಗೊಂಡಿವೆ.
ವರದಿ : ಲಾವಣ್ಯ ಅನಿಗೋಳ




