ಸ್ಮಾರ್ಟ್ ಶಾಪಿಂಗ್ ಕಾಲ ಶುರು! ಏನಿದು ಹೊಸ ʼAIʼ ಫೀಚರ್?

ಅಮೆಜಾನ್ ಇಂಡಿಯಾ ತನ್ನ ಬಹುನಿರೀಕ್ಷಿತ ʼಗ್ರೇಟ್ ಸಮ್ಮರ್ ಸೇಲ್ 2026ʼ ಅನ್ನು ಮೇ 8ರಿಂದ ಅಧಿಕೃತವಾಗಿ ಆರಂಭಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಫ್ಯಾಷನ್ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಮೆಗಾ ಸೇಲ್‌ನಲ್ಲಿ Samsung, Apple, OnePlus ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಉತ್ಪನ್ನಗಳ ಮೇಲೆ ಆಕರ್ಷಕ ಆಫರ್‌ಗಳು ಲಭ್ಯವಿವೆ. ವಿಶೇಷವಾಗಿ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶ.

ಸೇಲ್‌ನ ಪ್ರಮುಖ ಆಕರ್ಷಣೆಯಾಗಿ ಬ್ಯಾಂಕ್ ಆಫರ್‌ಗಳು ಹಾಗೂ ಹೆಚ್ಚುವರಿ ರಿಯಾಯಿತಿಗಳು ಕೂಡ ಲಭ್ಯವಿದೆ. ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ವ್ಯವಹಾರಗಳ ಮೇಲೆ ತಕ್ಷಣದ ಡಿಸ್ಕೌಂಟ್ ಸೌಲಭ್ಯ ನೀಡಲಾಗುತ್ತಿದೆ. ಪ್ರೈಮ್ ಸದಸ್ಯರಿಗೆ ಹೆಚ್ಚುವರಿ ಸೌಲಭ್ಯಗಳು ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳೂ ದೊರೆಯುತ್ತಿವೆ. ಈ ವರ್ಷದ ಸೇಲ್‌ನಲ್ಲಿ AI ಆಧಾರಿತ ಶಾಪಿಂಗ್ ಟೂಲ್‌ಗಳನ್ನು ಪರಿಚಯಿಸಲಾಗಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕ ಉತ್ಪನ್ನಗಳನ್ನು ಸುಲಭವಾಗಿ ಹುಡುಕಿಕೊಳ್ಳಲು ಸಹಾಯ ಮಾಡಲಿದೆ. ಉತ್ಪನ್ನ ಹೋಲಿಕೆ, ಬೆಲೆ ಇತಿಹಾಸ ಮತ್ತು ವೈಯಕ್ತಿಕ ಶಿಫಾರಸುಗಳ ಮೂಲಕ ಖರೀದಿ ಅನುಭವವನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಒಟ್ಟಾರೆಯಾಗಿ, ಅಮೆಜಾನ್ ಸಮ್ಮರ್ ಸೇಲ್ 2026 ಗ್ರಾಹಕರಿಗೆ ದೊಡ್ಡ ಉಳಿತ ಒದಗಿಸಿದ್ದು, ಹಲವು ವಿಭಾಗಗಳಲ್ಲಿ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ.

About The Author