Recipe: ಬೇಕಾಗುವ ಸಾಮಗ್ರಿ: ಅರ್ಧ ಲೀ ಹಾಲು, ಸ್ವಲ್ಪ ಏಲಕ್ಕಿ ಪುಡಿ, ಕೇಸರಿ, ಸಣ್ಣಗೆ ಕತ್ತರಿಸಿದ ಡ್ರೈಫ್ರೂಟ್ಸ್, ಹಾಲಿನ ಪುಡಿ, ಬ್ರೆಡ್, ಸಣ್ಣಗೆ ಕತ್ತರಿಸಿದ ಮಾವಿನ ಹಣ್ಣು, ಮ್ಯಾಂಗೋ ಪ್ಯೂರಿ, ಸಣ್ಣ ಕಪ್ ಕಂಡೆನ್ಸ್ ಮಿಲ್ಕ್,
ಮಾಡುವ ವಿಧಾನ: ಹಾಲನ್ನ ಚೆನ್ನಾಗಿ ಕಾಯಿಸಿ, ಅದಕ್ಕೆ ಕೇಸರಿ, ಏಲಕ್ಕಿ ಪುಡಿ, ಡ್ರೈಫ್ರೂಟ್ಸ್ ಹಾಕಿ ಕುದಿಸಿ. ನಂತರ ಹಾಲಿನ ಹುಡಿ, ಕಂಡೆನ್ಸ್ ಮಿಲ್ಕ್, ಹಾಕಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣವನ್ನು ತಣ್ಣಗಾಗಿಸಿ, ಮ್ಯಾಂಗೋ ಪ್ಯೂರಿ ಸೇರಿಸಿ.
ನಂತರ 1 ಬೌಲ್‌ನಲ್ಲಿ ಮ್ಯಾಂಗೋ ಪ್ಯೂರಿ, ಹಾಲಿನ ಪುಡಿ, ಡ್ರೈಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿ. ಈಗ ಬ್ರೆಡ್‌ನ್ನು ಗೋಲಾಕಾರದಲ್ಲಿ ಕತ್ತರಿಸಿ, 2 ಬ್ರೆಡ್ ಮಧ್ಯೆ ಈ ಮಿಶ್ರಣವನ್ನು ಹಾಕಿ, ಸ್ಯಾಂಡ್‌ವಿಚ್ ರೀತಿ ಮಾಡಿ 1 ಬೌಲ್‌ಗೆ ಹಾಕಿ. ಇದೇ ರೀತಿ 5ರಿಂದ 6 ಸ್ವೀಟ್ ಸ್ಯಾಂಡ್‌ವಿಚ್ ಮಾಡಿ ಇರಿಸಿ. ನಂತರ ಆಗಲೇ ತಯಾರಿಸಿದ ಹಾಲನ್ನು ಇದರ ಮೇಲೆ ಹಾಕಿ, ಜತೆಗೆ ಸಣ್ಣಗೆ ಕತ್ತರಿಸಿದ ಮಾವಿನ ಹಣ್ಣು ಸೇರಿಸಿ, 2 ತಾಸು ಫ್ರಿಜ್‌ನಲ್ಲಿರಿಸಿ, ಸವಿಯಲು ನೀಡಿ.




