ವೈರಲ್ ಆಯ್ತು ಸಿಎಂ ಹಳೆಯ ಡಾನ್ಸ್ ವೀಡಿಯೋ.. ಸಿದ್ದರಾಮಯ್ಯರ ಸ್ಟೆಪ್ಪೇ ಬೆಸ್ಟ್ ಅಂದ್ರು ನೆಟ್ಟಿಗರು

Viral News: ಸಿಎಂ ಸಿದ್ದರಾಮಯ್ಯ ಅವರು ಡಾನ್ಸ್ ಮಾಡಿರುವ ಹಳೆಯ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂಚೆ ಧರಿಸಿರುವ ಸಿದ್ದರಾಮಯ್ಯ, ತಮ್ಮವರ ಜತೆ ಸೇರಿ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಲು ಕಾರಣವೇನು ಅಂದ್ರೆ, ತಮಿಳುನಾಡು ಸಿಎಂ ಆಗಿರುವ ಜೋಸೆಫ್ ವಿಜಯ್, ಸಿಎಂ ಆದ ಬಳಿಕ ಡಾನ್ಸ್ ಮಾಡಿದ್ದಾರೆ.

ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಸಿದ್ದರಾಮಯ್ಯ ಅವರ ವೀಡಿಯೋ ಜತೆ ಈ ವೀಡಿಯೋ ಹೋಲಿಸಿ ನೋಡುತ್ತಿರುವ ಜನ, ಸಿದ್ದರಾಮಯ್ಯ ಅವರ ಸ್ಟೆಪ್ಪೇ ಚೆನ್ನಾಗಿತ್ತು ಎಂದು ಹೇಳಿದ್ದಾರೆ.

ದಳಪತಿ ಹಾಡಿಗೆ ವಿಜಯ್ ಸ್ಟೆಪ್ ಹಾಕಿದ್ರೆ, ಜನಪದ ಹಾಡಿಗೆ ಸಿದ್ದರಾಮಯ್ಯ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಹೋಲಿಸಿ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್ಸ್ ಬಂದಿದೆ.

About The Author