ಯುಎಇನಲ್ಲಿ ಆಯೋಜನೆಗೊಂಡಿರುವ ಐಪಿಎಲ್ ಟೂರ್ನಿ ಈ ಬಾರಿ ತಂಡದಿಂದ ಹೊರ ನಡೆಯುತ್ತಿರುವ ಆಟಗಾರರಿಂದಲೇ ಹೆಚ್ಚು ಸುದ್ದಿಯಾಗ್ತಿದೆ. ಸದ್ಯ ಈ ಸಾಲಿಗೆ ಅನುಭವಿ ಸ್ಪಿನರ್ ಹರ್ಭಜನ್ ಸಿಂಗ್ ಸಹ ಸೇರಿದ್ದಾರೆ. ರೈನಾ ತಂಡದಿಂದ ಹೊರನಡೆದ ಆಘಾತದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಬಜ್ಜಿ ಹೊಸ ಶಾಕ್ ನೀಡಿದ್ದಾರೆ.
ಐಪಿಎಲ್ ಟೂರ್ನಿಗಾಗಿ ಸಿಎಸ್ಕೆ ತಂಡದ ಆಟಗಾರರು ದುಬೈನಲ್ಲಿ ಇದ್ದಿದ್ದರೂ ಸಹ ತಾಯಿ ಅನಾರೋಗ್ಯದ ಕಾರಣ ನೀಡಿದ್ದ ಹರ್ಭಜನ್ ತಂಡದಿಂದ ದೂರವೇ ಇದ್ದರು. ಬುಧವಾರ ದುಬೈಗೆ ಪ್ರಯಾಣ ಬೆಳೆಸಬೇಕಿದ್ದ ಬಜ್ಜಿ ತಮ್ಮ ಆ ಪ್ರವಾಸವನ್ನೂ ರದ್ದು ಮಾಡಿದ್ರು. ಆಗ ಹರ್ಭಜನ್ ಸಿಂಗ್ ತಂಡದಿಂದ ಹೊರನಡೆಯುತ್ತಾರೆ ಎಂಬ ವದಂತಿ ಹೆಚ್ಚಾಗಿತ್ತು.
ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳದಿರೋ ಹರ್ಭಜನ್ ಸಿಂಗ್ ತಾವು ಈ ಬಾರಿ ಐಪಿಎಲ್ನಲ್ಲಿ ಭಾಗಿಯಾಗೋದಿಲ್ಲ ಎಂಬ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ನನ್ನ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ನಿಂದ ಬಿಡುವು ಪಡೆದುಕೊಳ್ತಿದ್ದೇನೆ. ಈ ಕಠಿಣ ಸಂದರ್ಭದಲ್ಲಿ ನನ್ನ ಕುಟುಂಬಸ್ಥರ ಜೊತೆ ಹೆಚ್ಚು ಕಾಲ ಕಳೆಯಲು ಬಯಸುವೆ, ನನ್ನ ನಿರ್ಧಾರವನ್ನ ಎಲ್ಲರೂ ಗೌರವಿಸುತ್ತೀರಾ ಎಂದು ಭಾವಿಸುತ್ತೇನೆ ಅಂತಾ ಮನವಿ ಮಾಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಪತ್ನಿ ಹಾಗೂ ಮಗಳೊಂದಿಗೆ ಮುಂಬೈನಲ್ಲಿದ್ದ ಹರ್ಭಜನ್ ಸಿಂಗ್ ಇದೀಗ ಪಂಜಾಬ್ನ ಜಲಂದರ್ನಲ್ಲಿ ನೆಲೆಸಿದ್ದಾರೆ.