Political News: ಪ್ರಧಾನಿ ನರೇಂದ್ರ ಮೋದಿ ರೋಮ್ ದೇಶಕ್ಕೆ ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ನಮ್ಮ ದೇಶದ ಫೇಮಸ್ ಚಾಕೋಲೇಟ್ ಆಗಿರುವ ಮೆಲೋಡಿ ಚಾಕೋಲೇಟ್ಸ್ ನೀಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. 1 ದೇಶದ ಪ್ರಧಾನ ಮಂತ್ರಿಯಂಥ ಉನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಇಂಥ ಸಿಲ್ಲಿ ಬಿಹೇವಿಯರ್ ಮಾಡಿದ್ದಾರೆಂದು ವಿರೋಧ ಪಕ್ಷದವರು ಸೇರಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಮೋದಿ ಫ್ಯಾನ್ಸ್, ಎಷ್ಟು ಕ್ಯೂಟ್ ಆಗಿರುವ ಸ್ನೇಹ ಇವರದ್ದು ಅಂತಾ ಖುಷಿ ಪಟ್ಟಿದ್ದಾರೆ.
ಇದೀಗ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ವ್ಯಂಗ್ಯವಾಡಿದ್ದು, ನಮಗೆ ದೇಶದ ಬಗ್ಗೆ ಚಿಂತಿಸುವ ಓರ್ವ ಉತ್ತಮ ಪ್ರಧಾನ ಮಂತ್ರಿ ಸಿಗಲಿಲ್ಲ. ಆದರೆ ತನ್ನ ಬಗ್ಗೆ ಕಂಟೆಂಟ್ ಹುಡುಕುವ ಇನ್‌ಫ್ಲುಯೆನ್ಸರ್ ಸಿಕ್ಕಿದ್ದಾರೆಂದು ಹೇಳಿದ್ದಾರೆ.
ಈ ಬಗ್ಗೆ ವೀಡಿಯೋ ಶೇರ್ ಮಾಡಿ, ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಬರೆದಿರುವ ಅವರು, ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಾಯಬಹುದು. ಆದರೆ ಮೆಲೋನಿ ಅವರಿಗೆ ಮೆಲೋಡಿ ನೀಡುವುದನ್ನು ತಡ ಮಾಡಲು ಸಾಧ್ಯವಿಲ್ಲ.
ನಿರ್ಣಾಯಕ ದ್ವಿಪಕ್ಷಿಯ ಸಮಸ್ಯೆ ಮತ್ತು ವಿದೇಶಾಂಗ ನಿತೀಯ ವಿಚಾರಗಳನ್ನು ಚರ್ಚಿಸುವ ಮಧ್ಯದಲ್ಲಿ ಪ್ರಧಾನಿ ಮೋದಿಯವರಿಗೆ, ನಾನು ಮೆಲೋನಿಗೆ ಮೆಲೋಡಿ ಚಾಕೋಲೇ”್ಸ್ ಖರೀದಿಸಬೇಕು ಎಂದೆನ್ನಿಸಿದೆ ಅಂದ್ರೆ ಇದರ ಬಗ್ಗೆ ನೀವೇ ಊಹಿಸಿ.
ಈ ಮೂರ್ಖತನದ ರೀಲ್ಸ್ ಜನರನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆ ಸೆಳೆಯುತ್ತದೆ ಎಂದು ಅವರು ಭಾವಿಸಿದ್ದಾರೆ. ಆದರೆ ನಿಜವಾದ ಜೋಕ್ ಅಂದ್ರೆ, ದೇಶದ ಬಗ್ಗೆ ಉತ್ತಮ ಮುಂದಾಲೋಚನೆ ಇರಬೇಕಾದ ಪ್ರಧಾನಿ ಸಿಗುವ ಜಾಗದಲ್ಲಿ ನಮಗೆ Content ಹುಡುಕುವ ಇನ್‌ಫ್ಲೂಯೆನ್ಸರ್ ಸಿಕ್ಕಿದ್ಾರೆಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
A remedy for the energy and economic crisis could wait.
But Melody for Ms. Meloni can’t be lateImagine this.
In the middle of discussing critical bilateral issues and matters of foreign policy, PM @narendramodi must have thought: “Hey, let me carry a pack of Melody chocolates… pic.twitter.com/HXJbLA8nqk
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 20, 2026




