Wednesday, November 26, 2025

Latest Posts

ದೇವರಿಗೆ ಹಾಕಿದ ಹೂವು ಪದೇ ಪದೇ ಬಿದ್ದರೆ ಏನರ್ಥ..?

- Advertisement -

ಕೆಲವೊಮ್ಮೆ ನಾವು ದೇವರಿಗೆ ಪೂಜೆ ಮಾಡುವ ವೇಳೆ, ದೇವರಿಗೆ ಹಾಕಿದ ಹೂವು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆ. ಇದಕ್ಕೆ ಕಾರಣವೇನು..? ಕೆಳಗೆ ಬಿದ್ದ ಹೂವನ್ನ ಏನು ಮಾಡಬೇಕು..? ಇದು ಯಾವುದರ ಸೂಚನೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ.

ಪೂಜೆ ಮಾಡುವ ಸಂದರ್ಭದಲ್ಲಿ ಅಥವಾ ಇನ್ನೋನು ಪೂಜೆ ಮುಗಿದೇ ಬಿಡುತ್ತೆ ಅನ್ನೋ ವೇಳೆಯಲ್ಲಿ ಕೆಲವೊಮ್ಮೆ, ದೇವರಿಗೆ ಹಾಕಿದ ಹೂವು ಬಿದ್ದು ಬಿಡುತ್ತೆ. ಹೀಗೆ ಬಿದ್ದ ಹೂವನ್ನ ಮತ್ತೆ ದೇವರಿಗೆ ಹಾಕಬಾರದು. ಇದನ್ನ ನಾವು ಪ್ರಸಾದವೆಂದು ಭಾವಿಸಿ ನಮ್ಮ ಬಳಿ ಇಟ್ಟುಕೊಳ್ಳಬೇಕು. ಅದು ಬಾಡಿ ಹೋಗುವವರೆಗೂ ನಮ್ಮ ಬಳಿ ಇಟ್ಟುಕೊಂಡು ಬಾಡಿ ಹೋದ ಬಳಿಕ, ಯಾವುದಾದರೂ ದೇವಸ್ಥಾನದ ಬಳಿ ಇರುವ ಪವಿತ್ರ ಮರಕ್ಕೋ ಅಥವಾ ನದಿಗೋ ಹಾಕಿ ಬರಬೇಕು.

ಹೀಗೆ ಮಾಡುವುದರಿಂದ ನೀವಂದು ಕೆಲಸಕಾರ್ಯಗಳು ಕೈಗೂಡುತ್ತದೆ ಎಂದರ್ಥ. ನೀವು ದೇವರಲ್ಲಿ ಕೇಳಿಕೊಂಡ ಕೆಲಸ ನೆರವೇರುತ್ತದೆ ಎಂದರ್ಥ. ಇನ್ನು ದೇವರಿಗೆ ನೀವು ಯಾವುದಾದರೂ ವರ ಕೇಳಿಕೊಂಡಾಗ, ಹೂವು ದೇವರ ಮೂರ್ತಿಯ ಬಲ ಭಾಗಕ್ಕೆ ಬಿದ್ದರೆ, ಕೇಳಿಕೊಂಡ ವರ ಈಡೇರುವುದೆಂದು ಅರ್ಥ. ದೇವರ ಎಡಭಾಗದಿಂದ ಹೂವು ಬಿದ್ದರೆ, ವರ ಈಡೇರುವುದಿಲ್ಲವೆಂದು ಅರ್ಥ.

ಇನ್ನು ದೇವರಿಗೆ ಎಂಥ ಹೂವು ಹಾಕಬಾರದೆಂಬ ವಿಷಯದ ಬಗ್ಗೆ ಹೇಳುವುದಾದರೆ, ಮುಟ್ಟಾದ ಹೆಂಗಸರು ಮುಟ್ಟಿದ ಹೂವು ದೇವರಿಗೆ ಹಾಕಬಾರದು. ಸುಗಂಧಭರಿತವಾದ ಹೂವು ಅಂದರೆ, ಮಲ್ಲಿಗೆ, ಸಂಪಿಗೆ, ಗುಲಾಬಿ ಹೂವಿನ ಪರಿಮಳ ತೆಗೆದುಕೊಂಡು, ಬಳಿಕ ದೇವರಿಗೆ ಆ ಹೂವು ಹಾಕಬಾರದು. ಇನ್ನು ಬಾಡಿಹೋದ ಹೂವು, ನೆಲಕ್ಕೆ ಬಿದ್ದ ಹೂವು ದೇವರಿಗೆ ಹಾಕಲು ಯೋಗ್ಯವಲ್ಲ. ಮುಳ್ಳಿನಿಂದ ಕೂಡ ಹೂವು ಹಾಕಿದರೆ, ದೋಷ ಉಂಟಾಗುತ್ತದೆ.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ತಾಯಿ ಜಗನ್ ಮಾತೆಯ ಆರಾಧಕರಾದ ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ.9886333327 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಿಮ್ಮ ಸಮಸ್ಯೆಗಳಾದ ಪ್ರೀತಿಯಲ್ಲಿ ನಂಬಿ ಮೋಸ ಮನೆಯಲ್ಲಿ ಅಶಾಂತಿ ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆ ಸ್ತ್ರೀ-ಪುರುಷ ವಶೀಕರಣ ಲೈಂಗಿಕ ವಶೀಕರಣ ಗಂಡ ಹೆಂಡತಿ ಕಲಹ ಇನ್ನೂ ಅನೇಕ ಗುಪ್ತ ಯಾವುದೇ ಕಠಿಣ ಸಮಸ್ಯೆಗಳಿದ್ದರೂ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಫೋನಿನ ಮೂಲಕ ಪ್ರಶ್ನೆ ಫೋನಿನ ಮೂಲಕ ಉತ್ತರ ಫೋನಿನ ಮೂಲಕ ಭವಿಷ್ಯ 9886777784.

- Advertisement -

Latest Posts

Don't Miss