ಕನ್ನಡದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ‘ಸು ಫ್ರಮ್ ಸೋ’ ಈಗ ಮರಾಠಿಗೆ ಎಂಟ್ರಿ ಕೊಟ್ಟಿದೆ! ಅದೂ ಸಿಂಪಲ್ ರಿಮೇಕ್ ಅಲ್ಲ ಟೈಟಲ್ನಿಂದಲೇ ಹೈಪ್ ಕ್ರಿಯೇಟ್ ಮಾಡಿದೆ ಸಿನಿಮಾ ಟೀಂ.
‘ಸುಲೋಚನ ಫ್ರಮ್ ಸೋಮೇಶ್ವರ’ ಅka ‘ಸು ಫ್ರಮ್ ಸೋ’ ಕೇವಲ 5 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಸೆನ್ಸೇಷನ್ ಆಗಿತ್ತು. ಈಗ ಇದೇ ಸಿನಿಮಾ ಮರಾಠಿಯಲ್ಲಿ ‘ತುಂಬಾಡ್ಚಿ ಮಂಜುಳಾ’ ಹೆಸರಿನಲ್ಲಿ ಬರುತ್ತಿದೆ.
ಈ ಟೈಟಲ್ ಕೇಳ್ತಿದ್ದಂತೆ ಸಿನಿ ಪ್ರೇಕ್ಷಕರಿಗೆ ಬಾಲಿವುಡ್ನ ಕಲ್ಟ್ ಹಿಟ್ ‘ತುಂಬಾಡ್’ ನೆನಪಾಗ್ತಿದೆ. ಅದೇ ವೈಬ್, ಅದೇ ಮಿಸ್ಟಿಕ್ ಫೀಲ್ ಬಳಸಿಕೊಂಡು ಮರಾಠಿ ವರ್ಶನ್ಗೆ ಈ ಹೆಸರು ಇಟ್ಟಿದ್ದಾರೆ ಅನ್ನೋ ಟಾಕ್ ಜೋರಾಗಿದೆ.
ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಹಳ್ಳಿ ಬ್ಯಾಕ್ಡ್ರಾಪ್, ಫುಲ್ ಕಾಮಿಡಿ, ಲೋಕಲ್ ಟಚ್… ಒಟ್ಟಾರೆ ಟ್ರೇಲರ್ ನೋಡಿದವರು “ಇದು ಪಕ್ಕಾ ಎಂಟರ್ಟೈನರ್” ಅಂತ ಕಾಮೆಂಟ್ ಮಾಡ್ತಿದ್ದಾರೆ.
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ… ಕನ್ನಡ ಟ್ರೇಲರ್ನಲ್ಲಿ ಸರ್ಪ್ರೈಸ್ ಆಗಿಟ್ಟಿದ್ದ ಕೆಲವು ಪಾತ್ರಗಳನ್ನು ಮರಾಠಿ ಟ್ರೇಲರ್ನಲ್ಲಿ ಈಗಾಗಲೇ ರಿವೀಲ್ ಮಾಡಿದ್ದಾರೆ. ಇದರಿಂದ ಕಥೆ ಹೇಗೆ ಟ್ವಿಸ್ಟ್ ಆಗುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ.
ಜಿತೇಂದ್ರ ಜೋಶಿ, ಓಂ ಭುಟ್ಕರ್, ಮಾರ್ಕಂಡ್ ಅನಸ್ಪುರೆ ನಟಿಸಿರುವ ಈ ಸಿನಿಮಾವನ್ನು ವಿವಿಧ್ ಕೊರಗಾಂವ್ಕರ್ ನಿರ್ದೇಶಿಸಿದ್ದಾರೆ. ಈಗ ಪ್ರಶ್ನೆ ಒಂದೇ… ಕನ್ನಡದಲ್ಲಿ ಮ್ಯಾಜಿಕ್ ಮಾಡಿದ ‘ಸು ಫ್ರಮ್ ಸೋ’, ಮರಾಠಿಯಲ್ಲೂ ಅದೇ ಲೆವೆಲ್ ಧಮಾಕಾ ಮಾಡುತ್ತಾ?
ಕಾಕ್ರೋಜ್ ಜನತಾ ಪಕ್ಷಕ್ಕೆ ಸಮಾವೇಶ ನಡೆಸಲು ಅನುಮತಿ ನಿರಾಕರಿಸಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಕಾರ್ಯಕ್ರಮದ ಉದ್ದೇಶ ಹಾಗೂ ಭಾಗವಹಿಸುವವರ ಮಾಹಿತಿ ಪರಿಶೀಲಿಸಿ ಪೊಲೀಸರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಜವಾಬ್ದಾರಿಯಾಗಿದ್ದು, ಸರ್ಕಾರವೂ ಅದಕ್ಕೆ ಸಹಕಾರ ನೀಡುತ್ತದೆ ಎಂದರು.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಕ್ಷಣೆ ಕೋರಿ ವಕ್ಫ್ ಬೋರ್ಡ್ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಬ್ಬಗಳ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷವು ಎಲ್ಲ ಸಮುದಾಯಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತದೆ ಎಂದು ಹೇಳಿದರು. ನಟ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವಿಚಾರವನ್ನು ಅಧಿಕಾರಿಗಳು ಈಗಾಗಲೇ ತಳ್ಳಿಹಾಕಿದ್ದಾರೆ ಎಂದೂ ಸ್ಪಷ್ಟಪಡಿಸಿದರು.




