Bollywood: ಬಾಲಿವುಡ್ ನಟಿ ಊರ್ಫಿ ಜಾವೇದ್ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸದಾಕಾಲ ಚಿತ್ರ ವಿಚಿತ್ರವಾಗಿ ಫ್ಯಾಷನ್ ಮಾಡಿಕ“ಂಡು, ವಸ್ತ್ರ ಧರಿಸಿ ಓಡಾಡುವ ಈ ನಟಿ ಈ ಬಾರಿ ಚೂಡಿಧಾರ ಧರಿಸಿ, ಅರಿಶಿನ-ಕುಂಕುಮ ಹಚ್ಚಿ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದಿದ್ದಾರೆ.
ಮಧ್ಯಪ್ರದೇಶದ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ಸದ್ಯ ಅಂಬುಬಾಚಿ ಜಾತ್ರೆ ನಡೆಯುತ್ತಿದೆ. ಋತುಮತಿಯಾಗುವ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಕಾಲವಿದು. ತಂತ್ರ ಮಾಡುವವರು ಈ ದೇವಸ್ಥಾನಕ್ಕೆ ಬಂದು ಶಕ್ತಿ ಹೆಚ್ಚಿಸಿಕ“ಳ್ಳುವ ಸಮಯ. ಈ ಸಮಯದಲ್ಲಿ ಹಲವರು ಕಾಮಾಕ್ಯ ದೇವಿಯ ದರ್ಶನಕ್ಕೆ ಹೋಗುತ್ತಾರೆ.
ಈ ಹಿಂದೆ ನನಗೆ ಮೈತುಂಬ ಬಟ್ಟೆ ಹಾಕಿದ್ರೆ ಅಲರ್ಜಿಯಾಗತ್ತೆ ಅಂತಾ ಹೇಳಿದ್ದ ಊರ್ಫಿ ಇದೀಗ ಮೈ ತುಂಬ ಬಟ್ಟೆ ಧರಿಸಿಯೇ ಕಾಮಾಕ್ಯ ದೇವಿಯ ದರ್ಶನ ಮಾಡಿದ್ದಾಳೆ. ಇನ್ನು ಊರ್ಫಿಯ ಈ ಅವತಾರ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಮುಸ್ಲಿಂ ಆಗಿರುವ ಊರ್ಫಿ ಹಿಂದೂ ಧರ್ಮ ಸ್ವೀಕರಿಸಿದ್ದಾರೆಂಬ ಸುದ್ದಿ ಹಬ್ಬಿತ್ತು. ರೀಟಾ ಭಾರಧ್ವಾಜ್ ಆಗಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆದರೆ ನಾನು ಹಿಂದೂ ಧರ್ಮಕ್ಕೆ ಮತಾಂತರವಾಗಿಲ್ಲವೆಂದು ಊರ್ಫಿ ಸ್ಪಷ್ಟಪಡಿಸಿದ್ದರು.




