Bengaluru: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧೆಗೆ 24 ಕೋಟಿ ರೂಪಾಯಿ ವಂಚನೆ: ಆರೋಪಿಗಳು ಬಂಧನ

Bengaluru: ಮನಿ ಲ್ಯಾಂಡರಿಂಗ್ ಹೆಸರಲ್ಲಿ ವೃದ್ಧೆಗೆ ಡಿಜಿಟಲ್ ಅರೆಸ್ಟ್ ಮಾಡಿ, 24 ಕೋಟಿ ರೂಪಾಯಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಶಿವಾಜಿನಗರದಲ್ಲಿ ನೆಲೆಸಿರುವ ಲಕ್ಷ್ಮೀ ರಾಮಮೂರ್ತಿ ಎಂಬ ವೃದ್ಧೆ ವಂಚನೆಗೆಗ“ಳಗಾಗಿದ್ದಾರೆ. ಲಕ್ಷ್ಮೀ ಅವರು ಆಸ್ತಿ ಮಾರಿದ್ದ ಕಾರಣ ಅವರಿಗೆ ಕೋಟಿ ಕೋಟಿ ಹಣ ಬಂದಿತ್ತು. ಅದನ್ನು ಅವರು ತಮ್ಮ ಅಕೌಂಟ್‌ನಲ್ಲೇ ಇರಿಸಿದ್ದರು. ಇದನ್ನು ತಿಳಿದಿದ್ದ ವಂಚಕರು ಮನಿ ಲ್ಯಾಂಡರಿಂಗ್ ಹೆಸರಿನಲ್ಲಿ ಡಿಜಿಟಲ್‌ ಅರೆಸ್ಟ್ ಮಾಡಿ 24 ಕೋಟಿ ರೂಪಾಯಿ ಸೈಬರ್ ವಂಚಕರು ದೋಚಿದ್ದಾರೆ.

ಅದಾದ ಬಳಿಕವೂ ಬಂಧನದ ಭೀತಿಯಲ್ಲಿದ್ದ ವೃದ್ಧೆಗೆ ಇನ್ನೂ ಹಣ ಬೇಕೆಂದು ಕೇಳಿದ್ದು, ಮನೆಯಲ್ಲಿದ್ದ ಚಿನ್ನವನ್ನು ಅಡ ಇಡಲು ವೃದ್ಧೆ ಬ್ಯಾಂಕ್‌ಗೆ ಬಂದಿದ್ದಾರೆ. ಇದನ್ನು ತಿಳಿದ ಅಲ್ಲಿನ ಬ್ಯಾಂಕ್ ಸಿಬ್ಬಂದಿ, ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬ್ಯಾಂಕ್‌ಗೆ ಧಾವಿಸಿದ ಪೋಲೀಸರು ವೃದ್ಧೆಯ ಬಳಿ ವಿಷಯ ಕೇಳಿದಾಗ, ಡಿಜಿಟಲ್ ಅರೆಸ್ಟ್ ಬಗ್ಗೆ ಹೇಳಿದ್ದು, 24 ಕೋಟಿ ರೂಪಾಯಿ ಕಳೆದುಕ“ಂಡ ಬಗ್ಗೆ ಹೇಳಿದ್ದಾರೆ.

ಬಳಿಕ ವಿದೇಶದಲ್ಲಿ ಇರುವ ಲಕ್ಷ್ಮೀ ಅವರ ಮಕ್ಕಳಿಗೆ ಈ ವಿಷಯವನ್ನು ತಿಳಿಸಲಾಗಿದೆ. ತಡ ಮಾಡದೇ ಪೋಲೀಸರು ಈ ಬಗ್ಗೆ ಕ್ರಮ ಕೈಗ“ಂಡಿದ್ದು, ಆರೋಪಿಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬಂಧಿಸಲಾಗಿದೆ. ಬಂಧಿತರು ಹಣವನ್ನು ಹಲವು ಅಕೌಂಟ್‌ಗಳಿಗೆ ಹಂಚಿದ್ದು, 60 ಲಕ್ಷ ಹಣ ಇರುವ ಬ್ಯಾಂಕ್ ಅಕೌಂಟ್‌ಗಳನ್ನು ಪೋಲೀಸರು ಸೀಜ್ ಮಾಡಿದ್ದಾರೆ. ತನಿಖೆ ಮುಂದುವರೆದಿದೆ.

About The Author