ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ, ಡಿಕೆಶಿ ಸಿಎಂ ಆಗೋದು ಗ್ಯಾರಂಟಿ: ಗಾಲಿ ಜನಾರ್ಧನ ರೆಡ್ಡಿ

Political News: ಕೊಪ್ಪಳದಲ್‌ಲಿಂದು ಮಾಧ್ಯಮದ ಜತೆ ಮಾತನಾಡಿರುವ ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಫಿಕ್ಸ್ ಅಂತಾ ನಾನು ಈಗಾಗಲೇ ಹೇಳಿದ್ದೆ. ಇಂದಿನ ಪರಿಸ್ಥಿತಿ ನೋಡಿದಾಗ, ನನಗೆ ಹಾಗೇ ಅನ್ನಿಸುತ್ತಿದೆ. ಡಿಕೆಶಿ ಅವರೇ ಮುಂದಿನ ಸಿಎಂ ಆಗಲಿದ್ದಾರೆ ಅಂತಲೇ ಅನ್ನಿಸುತ್ತಿದೆ ಎಂದು ಗಾಲಿ ಜನಾರ್ಧನ ರೆಡ್ಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಲ್ಲದೇ ಸಿದ್ಧರಾಮಯ್ಯನವರ ಸ್ಥಿತಿ ನಾವು ನೋಡಿದಾಗ, ಅವ್ರು ಈಗಾಗಲೇ 1 ನಿರ್ಧಾರಕ್ಕೆ ಬಂದಿದ್ದಾರೆ. ಮಾತಿನಂತೆ ನಡೆಯಬೇಕು ಎಂದು ಅವರು ತೀರ್ಮಾನಿಸಿ, ರಾಜೀನಾಮೆ ನೀಡಬೇಕೆಂದು ಅವರು ನಿರ್ಧರಿಸಿದ್ದಾರೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಈಗಾಗಲೇ ಸಭೆಯಲ್ಲಿ ತಾವಿಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇವೆ ಎಂದು ಹೇಳಿದ್ದಾರೆ. ಆದರೆ ಮುಂದಿನ ಸಿಎಂ ಯಾರಾಗಲಿದ್ದಾರೆಂದು ಎಂಬ ಗುಟ್ಟು ಮಾತ್ರ ರಟ್ಟು ಮಾಡಲಿಲ್ಲ.

ಅದೆಲ್ಲ ಹೈಕಮಾಂಡ್ ಹೇಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗೋದು ಬಹುತೇಕ ಫಿಕ್ಸ್ ಆಗಿದ್ದರೂ, ಜಿ.ಪರಮೇಶ್ವರ್, ಖರ್ಗೆ, ಸತೀಶ್ ಜಾರಕಿಹ“ಳಿ ಕೂಡ ಸಿಎಂ ರೇಸ್‌ನಲ್ಲಿರೋದು ಖಚಿತ.

About The Author