Political News: ಸರ್ಕಾರದ ಲಾಭಕ್ಕಾಗಿ ರೈತರ ಜಮೀನು ಬಳಿಸಿದರೆ ಉಗ್ರ ಹೋರಾಟ ಖಚಿತ: ಯತ್ನಾಳ್

Political News: ರೈತರ ಜಮೀನಿನನ್ನು ನಾಶ ಮಾಡಿ, ರಾಜ್ಯ ಸರ್ಕಾರ ತಮ್ಮ ಯೋಜನೆ ಶುರು ಮಾಡಲು ನಿರ್ಧರಿಸಿದೆ ಎಂದು ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದು, ಈ ಯೋಜನೆಯನ್ನು ರದ್ದುಗ“ಳಿಸದಿದ್ದರೆ, ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ರೈತರ ಮರಣ ಶಾಸನ ಆಗಲಿರುವ ಬಿಡದಿ ಟೌನ್ ಶಿಪ್ ಯೋಜನೆ, ಪಶ್ಚಿಮ ಘಟ್ಟಗಳಿಗೆ ಮಾರಕವಾಗಲಿರುವ ಶರಾವತಿ ಪಂಪ್ಡ್ ಸ್ಟೋರೇಜ್, ಹಾಗೂ ಆನೇಕಲ್ ನ ಫಲವತ್ತಾದ ಭೂಮಿಯಲ್ಲಿ ಬರುತ್ತಿರುವ ಕ್ರಿಕೆಟ್ ಸ್ಟೇಡಿಯಂ ಯೋಜನೆಗಳನ್ನು ಮುಂಬರುವ ಸಂಪುಟ ಸಭೆಯಲ್ಲಿ ರದ್ದುಗೊಳಿಸದಿದ್ದರೆ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಿಶ್ಚಿತ. ರಿಯಲ್ ಎಸ್ಟೇಟ್ ಲಾಬಿಗೆ , ಬಂಡವಾಳಶಿಗಳ ಒತ್ತಡಕ್ಕೆ ಶರಣಾಗಿರುವ ಸರ್ಕಾರ ಒತ್ತಾಯಪೂರ್ವಕವಾಗಿ ರೈತರ ಜಮೀನನ್ನು ಪಡೆಯುತ್ತಿರುವುದು ಖಂಡನೀಯ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೇಷ್ಮೆ, ಮಾವು, ಅಡಿಕೆ, ಬಾಳೆ, ತರಕಾರಿ, ಹಲಸು, ಪೇರಳೆ ಹೇಗೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿರುವ ಬಿಡದಿಯ ರೈತರು ಸಮೃದ್ಧರಾಗಿದ್ದರೆ. ಸುಮಾರು 6500 ಎಕರೆಯ ಅತ್ಯಂತ ಫಲವತ್ತಾದ, ನೀರಾವರಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಸ್ವಾಧೀನಪಡೆಸಿಕೊಳ್ಳುತ್ತಿರುವ ಸರ್ಕಾರದ ಕ್ರಮ ಅತಾರ್ಕಿಕವಾದದ್ದು.

ಕೃಷಿಗೆ ಯೋಗ್ಯವಲ್ಲದ ಭೂಮಿಗಳಲ್ಲಿ ಕೈಗಾರಿಕೆಗಳು, ವಸತಿ ಯೋಜನೆಗಳನ್ನು ರೂಪಿಸಬೇಕೇ ಹೊರತು ಸಮೃದ್ಧವಾದ ಕೃಷಿ ಭೂಮಿಯಲ್ಲಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಕೃಷಿ ಭೂಮಿಯನ್ನು ವಸತಿ ಯೋಜನೆ, AI ಸಿಟಿಗೆ ಮೀಸಲಿಡುವುದು ಸರ್ಕಾರದ ದೂರದರ್ಶಿತ್ವದ ಕೊರತೆ ತೋರಿಸುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

About The Author