Sandalwood: ನಟಿ ತ್ರಿವೇಣಿ ರಾವ್ ಟಗರು ಸಿನಿಮಾದಲ್ಲಿ ಕಾನ್‌ಸ್ಟೇಬಲ್ ಸರೋಜಾ ಪಾತ್ರದಲ್ಲಿ ಮಿಂಚಿ, ಪ್ರಸಿದ್ಧರಾಗಿದ್ದರು. ಬಳಿಕ ಅವರಿಗೆ ಕನ್ನಡ, ತೆಲುಗು ಸೇರಿ ಹಲವು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಇದೀಗ ಅವರು ಬಂದು ಮಿತ್ರರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆಂಬ ಸುದ್ದಿ ಇದೆ.
ಅಧಿಕೃತವಾಗಿ ತ್ರಿವೇಣಿ ರಾವ್ ಈ ಬಗ್ಗೆ ಘೋಷಿಸದಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಫೋಟೋ ವೈರಲ್ ಆಗಿದೆ. ತ್ರಿಪುರಾದ ಮಾಜಿ ಸಿಎಂ ಬಿಪ್ಲವ್ ಕುಮಾರ್ ದೇವ್ ಅವರ ಜತೆ ತ್ರಿವೇಣಿ ವಿವಾಹವಾಗಿದ್ದಾರೆಂಬ ಸುದ್ದಿ ಇದೆ.
ದೆಹಲಿಯಲ್ಲಿ ಮದುವೆಯಾಗಿದ್ದು, ಬಂಧು ಮಿತ್ರರು ಮಾತ್ರ ಈ ಸಂಭ್ರಮದಲ್ಲಿ ಪಾಲ್ಗ“ಂಡು, ವಧುವರರಿಗೆ ಆಶೀರ್ವದಿಸಿದ್ದಾರೆ.




