₹5,500 ಕೋಟಿ ಖರ್ಚು! ಸಿಕ್ಕಿದ್ದು 98% ಗುಂಡಿ, 2% ರಸ್ತೆ ಮಾತ್ರ: ಬೆಂಗಳೂರು ರಸ್ತೆ ಬಗ್ಗೆ ತೇಜಸ್ವಿ ಸೂರ್ಯ ಅಸಮಾಧಾನ

Political News: ಬೆಂಗಳೂರಿನಲ್ಲಿರುವ ರಸ್ತೆಗಳಲ್ಲಿ ಗುಂಡಿಗಳೇ ಹೆಚ್ಚಿದ್ದು, ಆಗಾಗ ಅಪಘಾತವಾಗಿ ಪ್ರಾಣಾಪಾಯಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಧ್ವನಿ ಎತ್ತಿರುವ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಉತ್ತಮ ರಸ್ತೆ ನಿರ್ಮಿಸಲು ನಗರಾಭಿವೃದ್ಧ ಸಚಿವರ ಬಳಿ ಆಗ್ರಹಿಸಿದ್ದಾರೆ.

₹5,500 ಕೋಟಿ ಖರ್ಚು! ಸಿಕ್ಕಿದ್ದು 98% ಗುಂಡಿ, 2% ರಸ್ತೆ ಮಾತ್ರ. ಬೆಂಗಳೂರಿನ ರಸ್ತೆಗಳ ಹೆಸರಲ್ಲಿ ಕಳೆದ 3 ವರ್ಷಗಳಲ್ಲಿ ಬರೋಬ್ಬರಿ ₹5,500 ಕೋಟಿ ಖರ್ಚಾಗಿದೆ. ಆದರೆ ಕಣ್ಣಿಗೆ ಕಾಣುತ್ತಿರುವುದು ಬರೀ ಗುಂಡಿಗಳದ್ದೇ ಸಾಮ್ರಾಜ್ಯ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡ ಅವರನ್ನು ಖುದ್ದಾಗಿ ಭೇಟಿಯಾಗಿ, 2 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕಳೆದ 3 ವರ್ಷಗಳಲ್ಲಿ ರಸ್ತೆ ದುರಸ್ತಿಗೆ ಕೋಟ್ಯಂತರ ರೂಪಾಯಿ ಬಿಡುಗಡೆಯಾಗಿದ್ದರೂ ಅದರ ಲೆಕ್ಕ ಎಲ್ಲಿದೆ? 30 ದಿನಗಳ ಒಳಗೆ ಸಂಪೂರ್ಣ ವಿವರಗಳಿರುವ ಶ್ವೇತಪತ್ರ ಹೊರಡಿಸುವುದು. ಮುಂದಿನ ₹2,000 ಕೋಟಿ ಹಣವನ್ನು ಜನಸಾಮಾನ್ಯರ ತೆರಿಗೆಯಿಂದ ರಸ್ತೆಗೆ ಸುರಿಯುವ ಮುನ್ನ, ಯಾವ ರಸ್ತೆ? ಯಾವ ಕಾಂಟ್ರಾಕ್ಟರ್? ಎಷ್ಟು ಬಜೆಟ್? ಎಂಬ ಸಂಪೂರ್ಣ ಮಾಹಿತಿ ಲೈವ್ ಆಗಿ ಕಾಣಿಸುವ ಇನ್ಫ್ರಾಸ್ಟ್ರಕ್ಚರ್ ಡ್ಯಾಶ್‌ಬೋರ್ಡ್ ಅನ್ನು 60 ದಿನಗಳ ಒಳಗೆ ಜಾರಿಗೆ ಬರಬೇಕು. ನೆನಪಿರಲಿ, ಇಲ್ಲಿ ಕೊರತೆ ಇರುವುದು ದುಡ್ಡಿನದ್ದಲ್ಲ, ಹೊಣೆಗಾರಿಕೆಯದ್ದು! ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

About The Author