Political News: ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ರಸ್ತೆ ದಾಟುವಾಗ ಓರ್ವ ಪಾದಚಾರಿ ಹೆಂಗಸು ಸಾವನ್ನಪ್ಪಿರುವ ಘಟನೆ ಕುರಿತು ಸಂಸದ ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸ್ಕೈ ವಾಕ್ ನಿರ್ಮಾಣದ ನಿರ್ಧಾರ ಕೈ ಬಿಟ್ಟಿದ್ದಕ್ಕೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಮುಖ್ಯಮಂತ್ರಿಗಳೇ, ಒಮ್ಮೆ ಸಾಮಾನ್ಯ ಪಾದಚಾರಿಯ ಬದುಕನ್ನೂ ನೋಡಿ. ಬನಶಂಕರಿ ಮೆಟ್ರೋ ನಿಲ್ದಾಣದಿಂದ ಬಿಎಂಟಿಸಿ ಬಸ್ ನಿಲ್ದಾಣದವರೆಗೆ ಸ್ಕೈವಾಕ್ ನಿರ್ಮಿಸಬೇಕೆಂದು ಕಳೆದ ಐದು ವರ್ಷಗಳಿಂದ ನಾನು ನಿರಂತರವಾಗಿ ಒತ್ತಾಯಿಸುತ್ತಿದ್ದೇನೆ. ಕೆಲವು ತಿಂಗಳ ಹಿಂದೆ ನೀವೇ ಬಂದು ಶಂಕುಸ್ಥಾಪನೆ ಮಾಡಿದ್ದೀರಿ. ಕೊನೆಗೂ ಕೆಲಸ ಆರಂಭವಾಗಲಿದೆ ಎಂದು ಭಾವಿಸಿದ್ದೆ. ಆದರೆ ಈಗ ಏನು ಹೇಳುತ್ತಿದ್ದಾರೆ ಗೊತ್ತೇ?
ಸ್ಕೈವಾಕ್ ಯೋಜನೆಯನ್ನೇ ಕೈಬಿಟ್ಟಿದ್ದಾರೆ. ಯಾರೋ ಕಂಟ್ರಾಕ್ಟರ್ ಫ್ಲೈಓವರ್ ಮಾಡೋಣ ಎಂದು ಸಲಹೆ ಕೊಟ್ಟಿದ್ದಾರೆ ಅಂತೆ. ಇಂದು ಅಲ್ಲಿಗೆ ಹೋಗಿ ಪಾದಚಾರಿಗಳ ಜೊತೆ ಮಾತನಾಡಿದಾಗ, ಕೆಲವೇ ವಾರಗಳ ಹಿಂದೆ ರಸ್ತೆ ದಾಟುವಾಗ ಒಬ್ಬ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ ವಿಡಿಯೋವನ್ನು ತೋರಿಸಿದರು. ಆ ಸಾವು ಸರ್ಕಾರವನ್ನು ಕದಲಿಸಲಿಲ್ಲ. ಆ ಜೀವದ ಬೆಲೆ ಯಾರಿಗೂ ಕಾಣಲಿಲ್ಲ ಎಂದು ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಏಕೆಂದರೆ ಈ ನಗರದ ಪಾದಚಾರಿಗಳು, ಬಿಎಂಟಿಸಿ ಪ್ರಯಾಣಿಕರು, ಮೆಟ್ರೋ ಪ್ರಯಾಣಿಕರು ನಿಮ್ಮ ಆದ್ಯತೆಯಲ್ಲ. ನಿಮ್ಮ ಆದ್ಯತೆ ಸಾವಿರಾರು ಕೋಟಿ ರೂಪಾಯಿಗಳ ಸುರಂಗ ಮಾರ್ಗ. ಒಬ್ಬ ಸಾಮಾನ್ಯ ಪಾದಚಾರಿಯ ಜೀವಕ್ಕಿಂತ ಸುರಂಗ ಮಾರ್ಗವೇ ಮುಖ್ಯವೇ? ಸ್ವಲ್ಪವಾದರೂ ಮಾನವೀಯತೆ ಇದ್ದರೆ, ಇನ್ನೊಂದು ಜೀವ ಬಲಿಯಾಗುವ ಮೊದಲು ಬನಶಂಕರಿ ಸ್ಕೈವಾಕ್ ಕಾಮಗಾರಿಯನ್ನು ಕೂಡಲೇ ಆರಂಭಿಸಿ ಎಂದು ರಾಜ್ಯ ಸರ್ಕಾರಕ್ಕೆ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳೇ,
ಒಮ್ಮೆ ಸಾಮಾನ್ಯ ಪಾದಚಾರಿಯ ಬದುಕನ್ನೂ ನೋಡಿ.
ಬನಶಂಕರಿ ಮೆಟ್ರೋ ನಿಲ್ದಾಣದಿಂದ ಬಿಎಂಟಿಸಿ ಬಸ್ ನಿಲ್ದಾಣದವರೆಗೆ ಸ್ಕೈವಾಕ್ ನಿರ್ಮಿಸಬೇಕೆಂದು ಕಳೆದ ಐದು ವರ್ಷಗಳಿಂದ ನಾನು ನಿರಂತರವಾಗಿ ಒತ್ತಾಯಿಸುತ್ತಿದ್ದೇನೆ.
ಕೆಲವು ತಿಂಗಳ ಹಿಂದೆ ನೀವೇ ಬಂದು ಶಂಕುಸ್ಥಾಪನೆ ಮಾಡಿದ್ದೀರಿ. ಕೊನೆಗೂ ಕೆಲಸ ಆರಂಭವಾಗಲಿದೆ ಎಂದು… pic.twitter.com/XjzzIgTaSr
— Tejasvi Surya (@Tejasvi_Surya) June 29, 2026




