Recipe: ಬೇಕಾಗುವ ಸಾಮಗ್ರಿ: 1 ಕಪ್ ಶೇಂಗಾ, ಕಾಲು ಕಪ್ ಹುರಿಗಡಲೆ, 10 ಎಸಳು ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ಸ್ವಲ್ಪ ಜೀರಿಗೆ, 2 ಸ್ಪೂನ್ ತೆಂಗಿನ ಎಣ್ಣೆ, ಕೊತ್ತೊಂಬರಿ ಸೊಪ್ಪು, ಖಾರ ಬೇಕಾದಷ್ಟು ಖಾರದ ಪುಡಿ, ಸ್ವಲ್ಪ ಸಕ್ಕರೆ ಅಥವಾ ಬೆಲ್ಲ, ಅವಶ್ಯಕತೆ ಇರುವಷ್ಟು ಉಪ್ಪು.
ಮಾಡುವ ವಿಧಾನ: ಶೇಂಗಾ, ಹುರಿಗಡಲೆ, ಬೆಳ್ಳುಳ್ಳಿ, ಕರಿಬೇವು, ಜೀರಿಗೆಯನ್ನು ಸಪರೇಟ್ ಆಗಿ ಹುರಿಯಿರಿ. ಬಳಿಕ ಕೊತ್ತೊಂಬರಿ ಸೊಪ್ಪನ್ನು ಸ್ವಲ್ಪ ಬಿಸಿ ಮಾಡಿ. ಬಳಿಕ, ಮಿಕ್ಸಿ ಜಾರ್ಗೆ , ಹುರಿದ ಎಲ್ಲ ಮಿಶ್ರಣದ ಜತೆ ಬೆಲ್ಲ ಅಥವಾ ಸಕ್ಕರೆ, ಎಣ್ಣೆ, ಉಪ್ಪು ಎಲ್ಲವನ್ನೂ ಸೇರಿಸಿ, ತರಿ ತರಿಯಾಗಿ ಪುಡಿ ಮಾಡಿದ್ರೆ, ಚಟ್ನಿಪುಡಿ ರೆಡಿ.
ಇದನ್ನು ನೀವು ಬಿಸಿ ಬಿಸಿ ಅನ್ನ ತುಪ್ಪ, ಇಡ್ಲಿ ತುಪ್ಪ, ದೋಸೆ, ಚಪಾತಿ ಜತೆ ಸವಿಯಬಹುದು.




