Gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ: ಹೂಡಿಕೆದಾರರಿಗೆ ಸಣ್ಣ ರಿಲೀಫ್..

Gold Rate: ಭಾರಿ ಕುಸಿತ ಕಂಡಿದ್ದ ಚಿನ್ನ-ಬೆಳ್ಳಿಯ ಬೆಲೆ ಸತತ ಎರಡನೇಯ ದಿನ ಹೆಚ್ಚಾಗಿದೆ. ಇಂದು ಚಿನ್ನದ ಬೆಲೆ ಗ್ರಾಮ್‌ಗೆ 225 ರೂಪಾಯಿ ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮ್‌ಗೆ 14,700 ರೂಪಾಯಿಯಾಗಿದ್ದು, 22 ಕ್ಯಾರೆಟ್ ಗೋಲ್ಡ್ ಬೆಲೆ 13,475 ರೂಪಾಯಿಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ 11 ಸಾವಿರ ದಾಟಿದೆ. ಇನ್ನು ಬೆಳ್ಳಿ ಬೆಲೆಯೂ ಗ್ರಾಮ್‌ಗೆ 5ರಿಂದ 10 ರೂಪಾಯಿ ಹೆಚ್ಚಿದೆ.

24 ಕ್ಯಾರೆಟ್ ಚಿನ್ನ 10 ಗ್ರಾಮ್ ಗೆ 1,47,000 ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 1,34,750 ಆಗಿದೆ. ಇನ್ನು ಬೆಳ್ಳಿ 100 ಗ್ರಾಮ್‌ಗೆ 25 ಸಾವಿರ ಆಗಿದ್ದು, ತಮಿಳುನಾಡು, ಕೇರಳದಲ್ಲಿ ಬೆಳ್ಳಿ ಬೆಲೆ 26 ಸಾವಿರ ರೂಪಾಯಿಗೆ ತಲುಪಿದೆ. ಇನ್ನು ಚಿನ್ನದ ಬೆಲೆ ಹೆಚ್ಚಾಯ್ತು ಎಂದು ಹೂಡಿಕೆ ಮಾಡಿದವರು ಇದೀಗ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.

ಮಾರುಕಟ್ಟೆ ತಜ್ಞರ ಪ್ರಕಾರ, ಹಬ್ಬದ ಸೀಸನ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಆಗಸ್ಟ್ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇತ್ತೀಚಿನ ಕುಸಿತದ ನಂತರ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಮತ್ತೆ ಚೇತರಿಕೆ ಕಂಡಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಬೆಲೆ ಏರಿಳಿತದ ಮೇಲೆ ಕಣ್ಣಿಟ್ಟಿರುವ ಅಗತ್ಯವಿದೆ.

About The Author