Haveri: ಮಳೆ ಕೊರತೆಯಿಂದ ತತ್ತರಿಸಿದ ಹಾವೇರಿ ಜಿಲ್ಲೆಯಾದ್ಯಂತ ಮೋಡ ಬಿತ್ತನೆಗೆ ತೀರ್ಮಾನ..

Haveri News: ಹಾವೇರಿ: ಕಳೆದ ಬಾರಿ ಅವಧಿಗೂ ಮುನ್ನ ಅಂದ್ರೆ ಮೇ ನಲ್ಲೇ ವರುಣಾರ್ಭಟ ಜೋರಾಗಿತ್ತು. ಆದರೆ ಈ ಬಾರಿ ಜುಲೈ ಆದರೂ ಸರಿಯಾಗಿ ಮಳೆ ಬರುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಅಪರೂಪಕ್ಕೆ ಮಳೆ ಬರುತ್ತಿದೆ.

ಹಾಗಾಗಿ ಹಾವೇರಿಯಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯಾದ್ಯಂತ ಕೃತಕ ಮಳೆ ಸುರಿಸಲು ಮೋಡ ಬಿತ್ತನೆಗೆ ಅಧಿಕೃತ ತೀರ್ಮಾನ ಮಾಡಲಾಗಿದ್ದು, ಜಿಲ್ಲೆಯ 6 ಜನ ಶಾಸಕರು ಒಗ್ಗಟ್ಟಾಗಿ ಮೋಡ ಬಿತ್ತನೆಗೆ ತಿರ್ಮಾನ ಮಾಡಿದ್ದಾರೆ.

ಶಾಸಕ ಪ್ರಕಾಶ್ ಕೋಳಿವಾಡರ ಖಾಸಗಿ ಸಂಸ್ಥೆ ಮೂಲಕ ಕಾರ್ಯಾಚರಣೆ ಆರಂಭವಾಗಿದ್ದು, ಈಗಾಗಲೇ ಅಗತ್ಯ ಅನುಮತಿಗಾಗಿ ಅರ್ಜಿ ಸಲ್ಲಿಕೆ, ತಾಂತ್ರಿಕ ಸಿದ್ಧತೆ ಪೂರ್ಣವಾಗಿದೆ. ಕೋಳಿವಾಡ ಅವರು ಕಳೆದ 2 ತಿಂಗಳ ಹಿಂದೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು DJCI ನಿಂದ ಮೋಡ ಬಿತ್ತನೆ ನಡೆಸಲು, ಕೋಳಿವಾಡ ಒಡೆತನದ PKK ಸಂಸ್ಥೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಹೀಗಾಗಿ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನ ಆಗಮನವಾಗಿದ್ದು, ಸಚಿವ ಸತೀಶ್ ಜಾರಕಿಹ“ಳಿ ಸೇರಿ ಎಲ್ಲ ಶಾಸಕರು ಮಂಗಳವಾರ ಮೋಡಗಳ ಸ್ಥಿತಿ ಪರಿಶೀಲಿಸಿ ಕಾರ್ಯಚರಣೆ ನಡೆಸಿದ್ದಾರೆ. ಸುಮಾರು ಮೂರು ದಿನಗಳ ಕಾಲ ಮೋಡ ಬಿತ್ತನೆ ನಡೆಸಲು ತಿರ್ಮಾನಿಸಲಾಗಿದೆ.

About The Author