Gold Rate: ದೇಶದಲ್ಲಿ ಚಿನ್ನದ ಬೆಲೆ ಸತತ ನಾಲ್ಕನೇ ದಿನವೂ ಇಳಿಕೆ ಕಂಡಿದ್ದು, ಆಭರಣ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಬದಲಾವಣೆ ಹಾಗೂ ಬೇಡಿಕೆ ಕುಸಿತದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಇಳಿಮುಖವಾಗಿದ್ದು, ಇಂದು 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ.
22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆ 12 ಸಾವಿರ ರೂ.ಗೂ ಹೆಚ್ಚು ಇಳಿಕೆಯಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ದರ ಒಟ್ಟಾರೆ 15 ಸಾವಿರ ರೂ.ಗಿಂತ ಹೆಚ್ಚು ಕುಸಿದಿದೆ. ಮದುವೆ ಹಾಗೂ ಹಬ್ಬದ ಸೀಸನ್‌ಗೆ ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಅನುಕೂಲಕರ ಬೆಳವಣಿಗೆಯಾಗಿದೆ. ಇಂದಿನ ದರದ ಪ್ರಕಾರ, 22 ಕ್ಯಾರಟ್ ಚಿನ್ನ ಪ್ರತಿ ಗ್ರಾಂ ₹13,315, 8 ಗ್ರಾಂ ಗೆ ₹1,06,520, 10 ಗ್ರಾಂ ₹1,33,150 ಹಾಗೂ 100 ಗ್ರಾಂಗೆ ₹13,31,500 ಆಗಿದೆ. 24 ಕ್ಯಾರಟ್ ಚಿನ್ನ ಪ್ರತಿ ಗ್ರಾಂಗೆ ₹14,526, 8 ಗ್ರಾಂಗೆ ₹1,16,208, 10 ಗ್ರಾಂಗೆ ₹1,45,260 ಹಾಗೂ 100 ಗ್ರಾಂಗೆ ₹14,52,600ಕ್ಕೆ ಮಾರಾಟವಾಗುತ್ತಿದೆ.
ದೇಶದ ಪ್ರಮುಖ ನಗರಗಳಾದ ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹1,33,150ರಿಂದ ₹1,34,000ರ ನಡುವೆ ದಾಖಲಾಗಿದೆ. ಪ್ರಮುಖ ನಗರಗಳ ಬಹುತೇಕ ಕಡೆ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಂದು 10 ಗ್ರಾಂ ಬೆಳ್ಳಿ ₹2,450, 100 ಗ್ರಾಂ ₹24,500 ಹಾಗೂ 1 ಕೆಜಿ ಬೆಳ್ಳಿ ₹2,45,000ಕ್ಕೆ ಸ್ಥಿರವಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಅಂತರರಾಷ್ಟ್ರೀಯ ಚಿನ್ನದ ಬೆಲೆ, ಡಾಲರ್ ಮೌಲ್ಯ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿಯೂ ಚಿನ್ನದ ದರದಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಚಿನ್ನ ಖರೀದಿಸಲು ಯೋಜಿಸುತ್ತಿರುವವರು ಪ್ರತಿದಿನದ ದರ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




