Gold Rate: ಸತತ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಇಂದು ಬ್ರೇಕ್ ಬಿದ್ದಿದೆ. ಶುಕ್ರವಾರ ದೇಶಾದ್ಯಂತ ಬಂಗಾರದ ದರದಲ್ಲಿ ಮತ್ತೆ ಏರಿಕೆ ದಾಖಲಾಗಿದ್ದು, ಪ್ರತಿ ಗ್ರಾಂಗೆ 145 ರೂಪಾಯಿ ಹೆಚ್ಚಳವಾಗಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಗ್ರಾಂ ಬೆಳ್ಳಿ ದರ ಐದು ರೂಪಾಯಿ ಹೆಚ್ಚಾಗಿದೆ.
ಜುಲೈ 10ರ ದರದ ಪ್ರಕಾರ, ಭಾರತದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 32 ಸಾವಿರ 750 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1 ಲಕ್ಷ 44 ಸಾವಿರ 820 ರೂಪಾಯಿಯಾಗಿದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 24 ಸಾವಿರ ರೂಪಾಯಿಗೆ ತಲುಪಿದೆ. ಒಂದು ಗ್ರಾಂ ದರದ ಪ್ರಕಾರ, 24 ಕ್ಯಾರಟ್ ಚಿನ್ನ 14,482 ರೂಪಾಯಿ, 22 ಕ್ಯಾರಟ್ ಚಿನ್ನ 13,275 ರೂಪಾಯಿ ಹಾಗೂ 18 ಕ್ಯಾರಟ್ ಚಿನ್ನ 10,862 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಳ್ಳಿಯ ಪ್ರತಿ ಗ್ರಾಂ ಬೆಲೆ 240 ರೂಪಾಯಿಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದ್ದು, 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 32 ಸಾವಿರ 750 ರೂಪಾಯಿ ಹಾಗೂ 100 ಗ್ರಾಂ ಬೆಳ್ಳಿಯ ಬೆಲೆ 24 ಸಾವಿರ ರೂಪಾಯಿಯಾಗಿದೆ. ಚೆನ್ನೈ ಸೇರಿದಂತೆ ಕೆಲ ನಗರಗಳಲ್ಲಿ ಬೆಳ್ಳಿಯ ದರ 24 ಸಾವಿರ 500 ರೂಪಾಯಿಗೆ ತಲುಪಿದೆ.
ಒಟ್ಟಾರೆ, ಕಳೆದ ಕೆಲ ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರ ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ನಡುವೆಯೇ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆಯೇ ಅಥವಾ ಸ್ಥಿರವಾಗುತ್ತದೆಯೇ ಎಂಬುದನ್ನು ಮಾರುಕಟ್ಟೆ ವಲಯ ಕಾತರದಿಂದ ಗಮನಿಸುತ್ತಿದೆ.




