Viral News: ಇಷ್ಟವಿಲ್ಲದ ಮದುವೆಯಿಂದ ಎಸ್ಕೇಪ್ ಆಗಲು ಜನ ಏನೆಲ್ಲಾ ಮಾಡ್ತಾರೆ..? ಲವ್ ಇದೆ, ನಾನು ಈಗಾಗಲೇ ಲಿವ್ ಇನ್‌ನಲ್ಲಿ ಇದ್ದೇನೆ.. ಹೀಗೆ ಅನೇಕ ಸುಳ್ಳುಗಳನ್ನು ಹೇಳ್ತಾರೆ. ಆದ್ರೆ ಇಲ್ಲೋರ್ವ ಯುವತಿ ಅಮ್ಮ ಮದುವೆ ಫಿಕ್ಸ್ ಮಾಡಲು ತಯಾರಾದಳೆಂದು ತಲೆ ಬೋಳಿಸಿದ್ದಾಳೆ.
ಆದರೆ ಸತ್ಯ ಬೇರೆಯೇ ಇದೆ. ಕೀರ್ತನಾಾ ಮೆನನ್ ಎಂಬಾಕೆ ಇತ್ತೀಚೆಗೆ ಕೂದಲು ಕತ್ತರಿಸಿದ್ದಾಳೆ. ಪೂರ್ತಿ ತಲೆ ಬೋಳಿಸಿದ್ದಾಳೆ. ಆದರೆ ಈಕೆಯ ತಲೆಗೂದಲು ಬೋಳಿಸುವ ವೀಡಿಯಾಗೆ ಈಕೆ, ಅಮ್ಮ ಮದುವೆ ಫಿಕ್ಸ್ ಮಾಡಲು ಮುಂದಾದಾಗ ಎಂದು ಕ್ಯಾಪ್ಶನ್ ನೀಡಿದ್ದಾಳೆ.
ಆದರೆ ಈಕೆ ಈ ಮುಂಚೆಯೇ ಬೇರೆಯ ಕಾರಣಕ್ಕೆ ತಲೆ ಬೋಳಿಸಿದ್ದಾಳೆ. ಆದರೆ ಯಾಕೆ ಹೀಗೆ ಮಾಡಿದ್ದಾಳೆಂದು ಎಲ್ಲಿಯೂ ರಿವೀಲ್ ಮಾಡಿಲ್ಲ. ಇನ್ನು ಈ ವೀಡಿಯೋಗೆ ತರಹೇವಾರಿ ಕಾಮೆಂಟ್ಸ್ ಬಂದಿದೆ. ಓರ್ವ ವ್ಯಕ್ತಿಯ ಜೀವನವನ್ನು ಹಾಳು ಮಾಡೋದಕ್ಕಿಂತ ಇದೇ ಉತ್ತಮ ಅಂತಾ ಓರ್ವ ಹೇಳಿದ್ದಾನೆ.
ಇನ್ನೋರ್ವ ಮದುವೆ ಅನ್ನೋದು ಎಂಥ ಸುಂದರ ಮತ್ತು ಪವಿತ್ರ ಬಂಧನ. ಆದರೆ ಇತ್ತೀಚೆಗೆ ಭಾರತದಲ್ಲಿ ಅದನ್ನು ಫೋರ್ಸ್‌ಫುಲ್ಲಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ. ಮತ್ತೋರ್ವ ನಿನ್ನ ಹಾಗೆ ಇರಲು ಧೈರ್ಯ ಬೇಕು ಎಂದಿದ್ದಾನೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..




