ಕ್ಯಾಲಿಫೋರ್ನಿಯಾದಲ್ಲಿ ಅಪಘಾತ: ಹೈದರಾಬಾದ್‌ನ ಒಂದೇ ಕುಟುಂಬದ ಮೂವರ ದುರ್ಮರಣ

California: ಕ್ಯಾಲಿಫೋರ್ನಿಯಾದಲ್ಲಿ ಭೀಕರ ಅಪಘಾತ ಸಂಭವಿಸಿ, ಹೈದರಾಬಾದ್‌ನ ಒಂದೇ ಕುಟುಂಬದ ಮೂವರ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಅಲ್ಲದೇ ಇನ್ನೂ ಇಬ್ಬರು ಗಾಯಗ“ಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಹೈದರಾಬಾದ್‌ನ ಸೈದಾಬಾದ್ ನಿವಾಸಿಯಾಗಿರುವ ಶೇಖ್ ನವೀದ್ ಎಂಬುವವರು, ಮನೆ ಮಂದಿ ಜತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ನವೀದ್ ಪತ್ನಿ, ಪುತ್ರ ಮತ್ತು ಪುತ್ರಿ ಸ್ಥಳದಲ್ಲೇ ಮೃತರಾಗಿದ್ದು, ನವೀದ್ ಮತ್ತು ಅವರ ಕಿರಿಯ ಪುತ್ರಿ ಗಂಭೀರವಾಗಿ ಗಾಯಗ“ಂಡಿದ್ದು, ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಮುಂದುವರಿಸಲಾಗಿದೆ.

ನವೀದ್ ಅವರ ತಂದೆ ಎಂದಿನಂತೆ ನವೀದ್‌ಗೆ ಕರೆ ಮಾಡಿದಾಗ, ಸಂಗತಿ ಬಯಲಿಗೆ ಬಂದಿದೆ. ಅಲ್ಲಿನ ಸ್ಥಳೀಯ ಪೋಲೀಸರು ಈ ವಿಷಯ ತಿಳಿಸಿದ್ದು, ಕ್ಯಾಲಿಫೋರ್ನಿಯಾಗೆ ಹೋಗಲು ಅವಕಾಶ ಮತ್ತು ಸಹಾಯ ಮಾಡುವಂತೆ ಕುಟುಂಬಸ್ಥರು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅವರಲ್ಲಿ ಮನವಿ ಮಾಡಿದ್ದಾರೆ.

ನವೀದ್ 10 ವರ್ಷದ ಹಿಂದೆ ಕೆಲಸ ಅರಸಿ, ಅಮೆರಿಕಕ್ಕೆ ಹೋಗಿದ್ದು, ಅಲ್ಲೇ ನೆಲೆಸಿದ್ದರು. ಇದೀಗ ಇಂಥ ದುರಂತ ಸಂಭವಿಸಿದ್ದು, ಕುಟುಂಬಸ್ಥರು ಮಗನನ್ನು ಭೇಟಿಯಾಗಲು ಮತ್ತು ನಿಧನರಾದವರ ಶವವನ್ನು ಭಾರತಕ್ಕೆ ತರಲು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

About The Author