Special Podcast: ನಾ ನಾಯಕಿ : 2015 ಆದ್ಮೇಲೆ ಏನೆಲ್ಲಾ ಆಯ್ತು?: Kusuma Hanumantharayappa

Special Podcast: ಕಾಂಗ್ರೆಸ್ ನಾಯಕಿ ಕುಸುಮಾ ರವಿ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಬಾಲ್ಯದ ಜೀವನ, ಶಾಲಾ-ಕಾಲೇಜು, ಮದುವೆ , ವೈವಾಹಿಕ ಜೀವನ ಎಲ್ಲದರ ಬಗ್ಗೆಯೂ ವಿವರಿಸಿದ್ದಾರೆ.

ಕುಸುಮ ಅವರು ಬೆಂಗಳೂರಿನಲ್ಲಿ ದೊಡ್ಡ ಒಟ್ಟು ಕುಟುಂಬದಲ್ಲಿ ಬೆಳೆದವರು. ತಮ್ಮ ತಂದೆ ಮತ್ತು ದೊಡ್ಡಪ್ಪ ಅವರ ಮಾರ್ಗದರ್ಶನದಲ್ಲಿ ಆರು ಜನ ಮಕ್ಕಳು ಒಂದೇ ಮನೆಯಲ್ಲಿ ಬೆಳೆದ ಅನುಭವವನ್ನು ಕುಸುಮಾ ಹಂಚಿಕೊಂಡಿದ್ದಾರೆ. ಅಲ್ಲದೇ ಮನೆ ಮತ್ತು ಕಾಲೇಜು ಹತ್ತಿರದಲ್ಲೇ ಇದ್ದ ಕಾರಣ ಶಾಲೆಯಿಂದ ಮನೆ, ಮನೆಯಿಂದ ಶಾಲೆ. ಅಲ್ಲದೇ ಸಂಜೆ 6 ಗಂಟೆ ಬಳಿಕ ನಮ್ಮನ್ನು ಎಲ್ಲಿಯೂ ಕಳುಹಿಸುತ್ತಿರಲಿಲ್ಲ. ಅಣ್ಣಂದಿರ ಜತೆಯೇ ಶಾಲೆ, ಕಾಲೇಜಿಗೆ ಹೋಗಬೇಕಿತ್ತು ಎಂದು ತಮ್ಮ ಬಾಲ್ಯದ ದಿನಗಳನ್ನು ಕುಸುಮಾ ನೆನಪಿಸಿಕ“ಂಡಿದ್ದಾರೆ.

ಅಲ್ಲದೇ ಎಂಜಿನಿಯರ್ ಫೈನಲ್ ಇಯರ್‌್ನಲ್ಲಿದ್ದಾಗ ಮದುವೆ ಪ್ರಪೋಸಲ್ ಬಂತು. ಮದುವೆಗೂ ಮುನ್ನ ತಂದೆ ಮೇಲೆ ಆರ್ಥಿಕವಾಗಿ ಡಿಪೆಂಡ್ ಇದ್ದೆ. ಮದುವೆಯ ಬಳಿಕ 5 ವರ್ಷ ಪತಿಯ ಮೇಲೆ ಡಿಪೆಂಡ್ ಇದ್ದೆ. ಆದರೆ 2015ರಲ್ಲಿ ಆದ ಘಟನೆಯಿಂದ ನನಗೆ ಹೆಣ್ಣು ಮಕ್ಕಳು ಇಂಡಿಪೆಂಡೆಂಟ್ ಆಗಿರುವುದು ಎಷ್ಟು ಮುಖ್ಯ ಅನ್ನೋದು ತಿಳೀತು. ಆಗಲೇ ನಮಗೆ ಮನೆಯಲ್ಲಿ ಮತ್ತು ಸಮಾಜದಲ್ಲಿ ಗೌರವ ಸಿಗೋದು ಅಂತಾನೂ ಮನವರಿಕೆಯಾಯ್ತು ಅಂತಾರೆ ಕುಸುಮಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author