Political News: ದಿವಂಗತ ಪೋಲೀಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರು ಕರ್ನಾಟಕ ಟವಿ ಸಂದರ್ಶನದಲ್ಲಿ ಮಾತನಾಡಿದ್ದು, ಜನ ತಮ್ಮ ಬಗ್ಗೆ ತಿಳಿದಿರುವ ತಪ್ಪು ಮಾಹಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕುಸುಮಾ ಅವರ ಪತಿ ಡಿ.ಕೆ.ರವಿ ಅವರು ನಿಧನರಾದ ಬಳಿಕ, ಆಕೆಯ ಅತ್ತೆ ಮಾವ ಕುಸುಮಾ ನಮಗೆ ಸೇರಿದ ಹಣವನ್ನು ಕಸಿದಿದ್ದಾಳೆಂದು ಆರೋಪಿಸಿದ್ದರು. ಆಕೆ ನಮಗೆ ಮೋಸ ಮಾಡಿದಳು ಎಂಬ ರೀತಿ ಆರೋಪಿಸಿದ್ದರು. ಆ ಬಗ್ಗೆ ಮಾತನಾಡಿರುವ ಕುಸುಮಾ, ನನ್ನ ಅತ್ತೆ-ಮಾವ ಹಳ್ಳಿಯಿಂದ ಬಂದವರಾಗಿದ್ದರು. ಆದರೂ ನಾನು ಅವರ ಸೇವೆ ಮಾಡಿದ್ದೇನೆ, ನಾನು ಅವರನ್ನು ಚೆನ್ನಾಗಿಯೇ ನೋಡಿಕ“ಂಡಿದ್ದೇನೆ. ಆದರೂ ಅವರು ಈ ರೀತಿ ಹೇಳಿಕೆ ನೀಡುತ್ತಾರೆಂದು ಭಾವಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಆ ಸಮಯದಲ್ಲಿ ನನ್ನ ಅಸ್ತಿತ್ವಕ್ಕೇ ಆ ಆರೋಪ ಧಕ್ಕೆ ತಂದಿತ್ತು. ನನ್ನ ಅಪ್ಪ ಅಮ್ಮ ಕೂಡ ನನ್ನ ಅತ್ತೆ ಮಾವನ ಬಗ್ಗೆ ಹೆಚ್ಚಾಗಿ ಯೋಚಿಸಿದ್ದರು. ಮಗಳ ಪತಿ ತೀರಿಹೋಗಿ, ಮಗಳ ಜೀವನ ಹಾಳಾಯ್ತು ಅನ್ನೋ ದುಃಖಕ್ಕಿಂತ, ಹೆತ್ತ ತಂದೆ ತಾಯಿ ಬಗ್ಗೆಯಾದರೂ ರವಿ ಯೋಚಿಸಬೇಕಿತ್ತು ಎಂದವರು ಹೇಳಿದ್ದರು. ಆದರೆ ನನ್ನ ಅತ್ತೆ-ಮಾವ ಹಣದ ವಿಷಯದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಹಾಕಿದ್ದು, ನನ್ನ ಅಸ್ತಿತ್ವಕ್ಕೇ ಧಕ್ಕೆ ತಂದಿತ್ತು ಎಂದು ಕುಸುಮಾ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.
