ರಾಹುಲ್ ಗಾಂಧಿಗೆ ಬಿಗ್ ಶಾಕ್ – ಶಾ ವಿರುದ್ಧದ ಹೇಳಿಕೆಗೆ ನೋಟಿಸ್!

ಸಂಸತ್ ರಾಜಕಾರಣದಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ. ಕೇಂದ್ರ ಗೃಹ ಸಚಿವ ‘ಅಮಿತ್ ಶಾ’ ಅವರ ವಿರುದ್ಧ ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯ ಸವಲತ್ತು ಸಮಿತಿ ಅಥವಾ ಹಕ್ಕುಸ್ವಾಮ್ಯ ಸಮಿತಿ ನೋಟಿಸ್ ಜಾರಿ ಮಾಡಿದೆ ಅಂತ ಹೇಳಲಾಗ್ತಿದೆ!

ಅಸಲಿಗೆ ಅಲ್ಲಿ ಆಗಿದ್ದೇನು ಅಂದ್ರೆ; ಕಳೆದ ತಿಂಗಳು ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ, ‘ರಾಹುಲ್ ಗಾಂಧಿ’ ಅವರು ಗೃಹ ಸಚಿವ ‘ಅಮಿತ್ ಶಾ’ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ಅಸಂಸದೀಯ ಪದಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ಸಂಸದರಾದ ‘ಸಂಜಯ್ ಜೈಸ್ವಾಲ್’ ಹಾಗೂ ‘ಅನುರಾಗ್ ಠಾಕೂರ್’ ಸ್ಪೀಕರ್ ‘ಓಂ ಬಿರ್ಲಾ’ ಅವರಿಗೆ ದೂರು ನೀಡಿದ್ದರು.

ಮುಖ್ಯವಾಗಿ, ರಾಹುಲ್ ಗಾಂಧಿ ಅವರು ಸದನದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳನ್ನು ವಿಭಿನ್ನ ವರ್ಗಗಳಾಗಿ ವಿವರಿಸಿ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಮತ್ತು ನಿಯಮ 352 ಹಾಗೂ 353 ಅನ್ನು ಉಲ್ಲಂಘಿಸಿದ್ದಾರೆ ಅಂತಾ ಅನುರಾಗ್ ಠಾಕೂರ್ ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ರಾಹುಲ್ ಗಾಂಧಿ ಅವರು ಸದನಕ್ಕೆ ಹಾಗೂ ಅಮಿತ್ ಶಾ ಅವರಿಗೆ ಯಾವುದೇ ಶರತ್ತುಗಳಿಲ್ಲದೆ ಕ್ಷಮೆಯಾಚಿಸಬೇಕು ಅಂತಲೂ ಒತ್ತಾಯಿಸಿದ್ದರು.

ಸದ್ಯ ಈ ದೂರಿನ ಆಧಾರದ ಮೇಲೆ ಎಚ್ಚೆತ್ತುಕೊಂಡಿರುವ ಲೋಕಸಭೆಯ ಸವಲತ್ತು ಸಮಿತಿ, ಆಗಸ್ಟ್ 28ರೊಳಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ.

ರಾಹುಲ್ ಗಾಂಧಿ ಅವರು ಈ ನೋಟಿಸ್‌ಗೆ ಏನು ಉತ್ತರ ಕೊಡಲಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು..ಈ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಕಾಮೆಂಟ್ ಮಾಡಿ ತಿಳಿಸಿ!

About The Author