ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಒಂದು ಬಿಗ್ ರಿಲೀಫ್ ಸಿಕ್ಕಿದೆ. ಹೌದು, ಮಾನದಂಡ ಉಲ್ಲಂಘಿಸಿ ಪಡೆದಿದ್ದಾರೆ ಅನ್ನೋ ಕಾರಣಕ್ಕೆ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡ್ತಿದ್ದ ಪ್ರಕ್ರಿಯೆಗೆ ಸದ್ಯಕ್ಕೆ ಬ್ರೇಕ್ ಹಾಕಲಾಗಿದೆ! ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಮಹತ್ವದ ಘೋಷಣೆ ಮಾಡಿದ್ದು, ಜನ ಸಾಮಾನ್ಯರಿಗೆ ದೊಡ್ಡ ನಿರಾಳ ಸಿಕ್ಕಂತಾಗಿದೆ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಎಸ್ ‘ಕೇಂದ್ರ ಸರ್ಕಾರದಿಂದ ಶಂಕಾಸ್ಪದ ಪಟ್ಟಿಗೆ ಸೇರಿಸಲ್ಪಟ್ಟ ಒಟ್ಟು 7 ಲಕ್ಷದ 65 ಸಾವಿರ ಬಿಪಿಎಲ್ ಕಾರ್ಡ್‌ಗಳ ಪೈಕಿ, ಈಗಾಗಲೇ ಸುಮಾರು 3 ಲಕ್ಷದ 50 ಸಾವಿರ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿತ್ತು. ಆದ್ರೆ ಈಗ ಜನರ ಹಿತದೃಷ್ಟಿಯಿಂದ, ಉಳಿದ ಪಡಿತರ ಚೀಟಿಗಳ ಪರಿಷ್ಕರಣೆ ಹಾಗೂ ರದ್ದತಿ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಅಂತ ಸ್ವತಃ ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣದುಬ್ಬರ ಜಾಸ್ತಿಯಾಗಿರೋ ಈ ಕಾಲದಲ್ಲಿ ಹಳೆ ನಿಯಮಗಳನ್ನೇ ಪಾಲನೆ ಮಾಡೋದು ಕಷ್ಟ ಆಗ್ತಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುತ್ತೆ ಅಂತ ತಿಳಿಸಿದ್ದಾರೆ.
ಅಲ್ಲದೆ, ಬೋಗಸ್ ಕಾರ್ಡ್‌ಗಳನ್ನು ಪತ್ತೆ ಹಚ್ಚೋಕೆ ಮತ್ತು ಪಡಿತರ ಸೋರಿಕೆ ತಡೆಯೋಕೆ e-KYC ಪ್ರಕ್ರಿಯೆ ಕಡ್ಡಾಯ ಮಾಡಲಾಗಿದೆ. ರಾಜ್ಯದ ಪ್ರತಿಯೊಬ್ಬ ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ದೃಢೀಕರಣ ಮಾಡಿಸಿಕೊಳ್ಳಬೇಕಿದೆ. ಸುಮಾರು 5 ವರ್ಷಗಳ ಬಳಿಕ ಈ ಪ್ರಕ್ರಿಯೆ ನಡೀತಿರೋದ್ರಿಂದ, ಇ-ಕೆವೈಸಿ ಮುಗಿದ ಮೇಲಷ್ಟೇ ಅನರ್ಹ ಕಾರ್ಡ್‌ಗಳ ನಿಖರ ಮಾಹಿತಿ ಸಿಗಲಿದೆ. ಈ ಪ್ರಕ್ರಿಯೆ ಮುಗಿದ ಮೇಲೆ, ರದ್ದಾದ ಜಾಗದಲ್ಲಿ ಹೊಸ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತೆ ಅಂತಾನೂ ಸಚಿವರು ಭರವಸೆ ಕೊಟ್ಟಿದ್ದಾರೆ.
ಇನ್ನು ತಮಗೆ ಸಿಕ್ಕಿರೋ ಹೊಸ ಜವಾಬ್ದಾರಿ ಬಗ್ಗೆ ಮಾತಾಡಿದ ರಿಜ್ವಾನ್ ಅರ್ಷದ್, ‘ಸಿಎಂ ಡಿ.ಕೆ. ಶಿವಕುಮಾರ್ ನನಗೆ ಮಹತ್ವದ ಇಲಾಖೆ ಕೊಟ್ಟಿದ್ದಾರೆ. ರಾಜ್ಯದ ಶೇ. 60ರಷ್ಟು ಜನರನ್ನು ನೇರವಾಗಿ ತಲುಪುವ ಇಲಾಖೆ ಇದು. ಮುಂದಿನ ದಿನಗಳಲ್ಲಿ ಈ ಇಲಾಖೆಯನ್ನ ಮತ್ತಷ್ಟು ಕ್ರಿಯಾತ್ಮಕವಾಗಿ ರೂಪಿಸುತ್ತೇವೆ’ ಅಂತ ಖುಷಿ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ನೋಡೋದಾದ್ರೆ ‘ಕಾರ್ಡ್ ರದ್ದತಿಗೆ ಸದ್ಯ ಬ್ರೇಕ್ ಬಿದ್ದಿರೋದ್ರಿಂದ ಕಾರ್ಡ್‌ದಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇ-ಕೆವೈಸಿ ಕಡ್ಡಾಯವಾಗಿರೋದ್ರಿಂದ, ಎಲ್ಲರೂ ಬೇಗ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ಜೋಡಣೆ ಮಾಡಿಸಿಕೊಳ್ಳೋದು ಒಳ್ಳೆಯದು.




