ಯುಜಿಸಿ-ನೆಟ್ ಪರೀಕ್ಷೆ ರದ್ದು: NTA ವಿರುದ್ಧ ರಾಹುಲ್ ಗಾಂಧಿ ಆಕ್ರೋಶ, ಮರುಪರೀಕ್ಷೆ ದಿನಾಂಕ ಪ್ರಕಟ!

ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ದೊಡ್ಡ ಆಘಾತ ಎದುರಾಗಿದೆ. ದೋಷಪೂರಿತ ಪ್ರಶ್ನೆಪತ್ರಿಕೆಗಳ ಕಾರಣಕ್ಕೆ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಘೋಷಿಸಿದೆ. ಹೌದು ‘ಇಂಗ್ಲಿಷ್, ಕಾಮರ್ಸ್ ಮತ್ತು ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆಗಳು ರದ್ದಾಗಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಹಾಗೂ NTA ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮೋದಿ ಜಿ, ನಿಮ್ಮ NTA ಏನು ಮಾಡ್ತಿದೆ ನೋಡಿ! ತಪ್ಪು ಮಾಡಿದ್ದು NTA, ಆದರೆ ಶಿಕ್ಷೆ ಅನುಭವಿಸುತ್ತಿರುವುದು ಅಮಾಯಕ ವಿದ್ಯಾರ್ಥಿಗಳು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರ್ಷಗಟ್ಟಲೆ ಶ್ರಮಪಟ್ಟು, ದುಡ್ಡು ಕೊಟ್ಟು ಫಾರ್ಮ್ ತುಂಬಿ, ದೂರದ ಕೇಂದ್ರಗಳಿಗೆ ಪ್ರಯಾಣಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ಮತ್ತೆ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ಬರೆಯುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಲ್ಲದೆ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿರುವ ಅವರು, “ಇದು ಶಿಕ್ಷಣ ವ್ಯವಸ್ಥೆಯಾಗಿ ಉಳಿದಿಲ್ಲ, ಇದೊಂದು ಹಣ ದೋಚುವ ಯಂತ್ರ. ಇದು ವಿದ್ಯಾರ್ಥಿಗಳ ಹಣ, ಅಮೂಲ್ಯ ಸಮಯ ಹಾಗೂ ಮಾನಸಿಕ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆಯೇ ಎಂಬ ಪ್ರಶ್ನೆಗೆ NTA ಇನ್ನೂ ಉತ್ತರಿಸುತ್ತಿಲ್ಲ ಎಂದೂ ಆರೋಪಿಸಿದ್ದಾರೆ.

ಇನ್ನೂ ‘ಜೂನ್ ತಿಂಗಳಲ್ಲಿ ನಡೆದಿದ್ದ ಈ ಮೂರು ವಿಷಯಗಳ ಪರೀಕ್ಷೆಗಳ ಮರುಪರೀಕ್ಷೆಯ ದಿನಾಂಕಗಳು ಈಗ ಪ್ರಕಟವಾಗಿದ್ದು ಅದರ ಡೇಟ್ಸ್ ನೋಡೊದಾದ್ರೆ;

ಇಂಗ್ಲಿಷ್ ಮತ್ತು ಕಾಮರ್ಸ್: ಸೆಪ್ಟೆಂಬರ್ 9ರಂದು ಮರುಪರೀಕ್ಷೆ ನಡೆಯಲಿದೆ. ಸೋಷಿಯಾಲಜಿ – ಸೆಪ್ಟೆಂಬರ್ 10ರಂದು ಮರುಪರೀಕ್ಷೆಗೆ ನಿಗದಿಯಾಗಿದೆ ಅಂತ ಹೇಳಲಾಗ್ತಿದೆ! ಇದರ ನಡುವೆ ‘ವಿದ್ಯಾರ್ಥಿಗಳಿಗೆ ಸಮಾಧಾನಕರ ಸಂಗತಿ ಅಂದ್ರೆ, ಮರುಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು NTA ಸ್ಪಷ್ಟನೆ ಕೊಟ್ಟಿದೆ.

ಒಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆಯೊಂದರ ಲೋಪದಿಂದಾಗಿ ವಿದ್ಯಾರ್ಥಿಗಳು ಮತ್ತೆ ಆತಂಕಕ್ಕೀಡಾಗುವಂತಾಗಿದೆ ಅಂತಾನೆ ಹೇಳಬಹುದು. ಈ ಕುರಿತು ನಿಮ್ಮ ಅನಿಸಿಕೆಗಳೇನು? ಕಮೆಂಟ್ ಮಾಡಿ ತಿಳಿಸಿ.

About The Author