Political News: ಬಿ.ಕೆ.ಹರಿಪ್ರಸಾದ್ ಅವರಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ 100 ದಿನಗಳ ಸಂಭ್ರಮೋತ್ಸವಕ್ಕೆ ಸರಿಯಾಗಿ ಆಹ್ವಾನ ನೀಡಲಿಲ್ಲವೆಂದು, ಅಸಮಾಧಾನಗ“ಂಡಿದ್ದು, ಹೈಕಮಾಂಡ್‌ಗೂ ಈ ಬಗ್ಗೆ ಮಾಹಿತಿ ತಲುಪಿದೆ.
ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಸರ್ಕಾರದ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಈ ಎಲ್ಲದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ʼಮನೆಯೊಂದು ಮೂರು ಬಾಗಿಲುʼ ಆಗಿದೆ ಎಂದಿದ್ದಾರೆ.
ಮುಖ್ಯಮಂತ್ರಿಗಳದ್ದೇ ಒಂದು ದಿಕ್ಕು, ಸಿದ್ದರಾಮಯ್ಯನವರದ್ದೇ ಇನ್ನೊಂದು ದಿಕ್ಕು, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರದ್ದೇ ಮತ್ತೊಂದು ದಿಕ್ಕು. ಒಬ್ಬರಿಗೊಬ್ಬರು ಒಳಗೊಳಗೇ ಕತ್ತಿ ಮಸೆಯುತ್ತಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ 100 ದಿನದ ಸರ್ಕಾರದ ಸಂಭ್ರಮಾಚರಣೆಯಲ್ಲಿ ಪರಿಷತ್ ಸದಸ್ಯರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರನ್ನು ಕರೆಯಲೂ ಇಲ್ಲ, ಖುರ್ಚಿ ಹಾಕಲೂ ಇಲ್ಲ. ಸಂಪೂರ್ಣ ಕಡಗಣನೆಗೊಳಗಾಗಿರುವ ಸಿದ್ದರಾಮಯ್ಯ ಅವರು ದೂರು ಹೊತ್ತು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಬಳಿ ತಮ್ಮ ಕೋಪ ಹೇಳಿಕೊಂಡಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ಡಿ ಕೆ ಶಿವಕುಮಾರ್ ಅವರು ತಮ್ಮದು ಬಂಡೆ ಸರ್ಕಾರ ಎಂಬ ಭ್ರಮೆಯಲಿ ಯಾರನ್ನೂ ಲೆಕ್ಕಿಸದೇ ಅವರದೇ ಹಾದಿಯಲ್ಲಿ ಸಾಗಿದ್ದಾರೆ. ಇದು ಸದ್ಯದ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ. ಈ ಸಂದರ್ಭದಲ್ಲಿ ಮಹಿಳಾ ಪ್ರಾತಿನಿಧ್ಯವಿಲ್ಲದ ಸಂಪುಟದ ಬಗ್ಗೆ ಬಿ ಕೆ ಹರಿಪ್ರಸಾದ್ ಕ್ಷಮೆ ಕೋರಿದ್ದಾರೆ. ಅದಾನಿಯೊಂದಿಗಿನ ಮುಖ್ಯಮಂತ್ರಿಗಳ ಸಂಬಂಧದ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ.
ಇವೆಲ್ಲವುದರಗಳ ನಡುವೆ ಜಾರಿ ನಿರ್ದೇಶನಾಯಲದ ತನಿಖಾ ಕಾರ್ಯಾಚರಣೆಯಲ್ಲಿ ಸಿಲುಕಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿಯವರು ತಮ್ಮ ವಿರುದ್ಧ ದೂರು ಕೊಟ್ಟವರು ಕಾಂಗ್ರೆಸ್ಸಿಗರೇ ಎಂದು ದೂರುತ್ತಿದ್ದಾರೆ. ವ್ಯಕ್ತಿಗತ ಸ್ವಪ್ರತಿಷ್ಠೆಗಳ ನಡುವೆ ಕರ್ನಾಟಕ ನಲುಗುತ್ತಿದೆ. ಜನರ ನಿವೇಧನೆ ಕೇಳುವವರಿಲ್ಲ. ಸ್ಥಗಿತಗೊಂಡ ಅಭಿವೃದ್ಧಿ ಕಾರ್ಯಗಳು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟೇ ಇಲ್ಲ. ಎಂದಿನಂತೆ ಜಾಹಿರಾತುಗಳಲ್ಲಿ ತಮ್ಮನ್ನು ಬಿಂಬಿಸಿಕೊಳ್ಳಲು ಜನರ ತೆರಿಗೆ ಹಣ ವ್ಯಯಿಸಿ ಜಾಹಿರಾತುಗಳಲ್ಲಿ ಮಾತ್ರ ಅಭಿವೃದ್ಧಿ ಕಾಣಿಸಲು ಮುಖ್ಯಮಂತ್ರಿಗಳು ಕಸರತ್ತು ನಡೆಸುತ್ತಿದ್ದಾರೆ ಎಂದು ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.




