ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರೀಸ್ ಭಾರತೀಯ ಮೂಲದವರು ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇಂಡಿಯನ್ ಅಮೆರಿಕನ್ಸ್ ಹಾಗೂ ಆಫ್ರಿಕನ್ ಅಮೆರಿಕನ್ಸ್ ಮತವನ್ನ ಸೆಳೆಯುತ್ತಿರೋ ಕಮಲಾ ಹ್ಯಾರೀಸ್ ಸ್ಪರ್ಧೆ ಅಮೆರಿಕ ಅಧ್ಯಕ್ಷ ಟ್ರಂಪ್ ಪಾಲಿಗೆ ಬಿಸಿತುಪ್ಪವಾಗಿದೆ.

ಭಾರತೀಯ ಮೂಲದ ಕಪ್ಪುವರ್ಣದ ಮಹಿಳೆ ಕಮಲಾರನ್ನ ಈಗಾಗಲೇ ಅಮೆರಿಕದ ಜನತೆ ಮತ್ತೊಬ್ಬ ಒಬಾಮ ಅಂತಾನೇ ಕರೆಯುತ್ತಿದ್ದಾರೆ. ಅಮೆರಿಕದಂತಹ ದೇಶದಲ್ಲಿ ರಾಜಕೀಯ ಹಾದಿಯಲ್ಲಿ ಬರಲು ನನಗೆ ತಾಯಿಯೇ ಮಾದರಿ ಅಂತಾ ಕಮಲಾ ಹೇಳಿದ್ದಾರೆ.
ನನ್ನ ತಾಯಿ ನನಗೆ ಯಾವಾಗಲೂ ಸುಮ್ಮನೇ ಕೂರಲು ಹೇಳಿಕೊಡಲೇ ಇಲ್ಲ.ನನ್ನ ತಾಯಿಯ ಪ್ರತಿಯೊಂದು ಮಾತುಗಳು ನನ್ನ ಜೀವನಕ್ಕೆ ದಾರಿದೀಪವಾಗಿದೆ. ಸಮಸ್ಯೆಗಳ ವಿರುದ್ಧ ಹೋರಾಡಲು ನನಗೆ ಧೈರ್ಯ ನೀಡಿದೆ. ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ನನ್ನ ಈ ಸಾಧನೆ ಬಗ್ಗೆ ನನ್ನ ತಾಯಿಗೆ ಹೆಮ್ಮೆ ಇದೆ ಅಂತಾ ಹೇಳಿದ್ರು.
