Bhopal News: 16 ಲಕ್ಷ ಫಾಲೋವರ್ಸ್ ಹೊಂದಿದ್ದ 30 ವರ್ಷದ ಇನ್ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.
ನಿಧಿಗೆ ಫೇಸ್ಬುಕ್ನಲ್ಲಿ 9 ಲಕ್ಷಕ್ಕೂ ಅಧಿಕ ಫಾಲೋವರ್ ಮತ್ತು ಇನ್ಸ್ಟಾಾದಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದರು. ಇವರ ವೀಡಿಯೋಗೆ ಲಕ್ಷಾಂತರ ವೀವ್ಸ್, ಲೈಕ್ಸ್, ಶೇರ್, ಕಾಮೆಂಟ್ಸ್ ಬರುತ್ತಿತ್ತು. ಸ್ಥಳೀಯವಾಗಿ ನಿಧಿ ಪ್ರಸಿದ್ಧರಾಗೇ ಇದ್ದರು.
ಆಕೆ ಸಾಯುವ ಮುನ್ನ ಫೋನ್ನಲ್ಲಿ ಸುಮಾರು ಸಮಯ ಯಾರ ಜತೆಗೋ ಮಾತನಾಡಿದ್ದಾರೆಂದು ಮನೆಯವರು ತಿಳಿಸಿದ್ದಾರೆ. ಬಳಿಕ ಆಕೆಯ ಕೋಣೆಯಲ್ಲಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಇದನ್ನು ಗಮನಿಸಿದ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ.
ಈ ಬಗ್ಗೆ ಸ್ಥಳೀಯ ಪೋಲೀಸ್ ಸ್ಟೇಶನ್ನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೋಲೀಸರು ಆಕೆಯ ಫೋನ್ ಕಾಲ್, ವಾಟ್ಸಪ್ ಮೆಸೇಜ್ ಪರಿಶೀಲಿಸಿ, ತನಿಖೆ ಮುಂದುವರಿಸಿದ್ದಾರೆ.




