Special Podcast: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಿ.ಕೆ.ಶಿವಕುಮಾರ್ ಸಾಹೇಬ್ರು ಒಕ್ಕಲಿಗರ ನಾಯಕ ಆಗಬಾರದು ಎಂಬುದು ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಅದಕ್ಕಾಗಿ ಅವರು ಅಡ್ಡಗಾಲಾಗಿದ್ದರೂ, ಆದರೂ ಶಿವಕುಮಾರ್ ಅವರು ಈಗ ಒಕ್ಕಲಿಗ ನಾಯಕರಾಗಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ನಲಪಾಡ್ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ, ನಿಖಿಲ್ ಕುಮಾರ್ ವಿರುದ್ಧ ನಲಪಾಡ್ ಕಿಡಿಕಾರಿದ್ದು, ನಿಖಿಲ್ ಯಾರು..? 1 ಬಾರಿಯೂ ಎಲೆಕ್ಷನ್ನಲ್ಲಿ ಗೆಲುವು ಸಾಧಿಸಲಿಲ್ಲ. ಬೈ ಎಲೆಕ್ಷನ್ನಲ್ಲಿ ಸೋತರು, ಇನ್ನ“ಂದು ಎಲೆಕ್ಷನ್ನಲ್ಲೂ ಸೋತಿದ್ದಾರೆ. ಅಂಥವರು ಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುತ್ತಾರೆ ಎಂದು ನಲಪಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಬೇಕಾದ್ರೆ ಡಿಸೆಂಬರ್ನಲ್ಲಿ ನಡೆಯುವ ಬಿಬಿಎಂಪಿ ಎಲೆಕ್ಷನ್ನಲ್ಲಿ ನಿಲ್ಲಲಿ ಅಲ್ಲಿಯೂ ಅವರನ್ನು ನಾವು ಸೋಲಿಸುತ್ತೇವೆ ಎಂದು ನಲಪಾಡ್ ಸವಾಲ್ ಹಾಕಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




