Horoscope: ನಾವಿಂದು ಮನೆಯಿಂದ ಆಚೆ ಇದ್ದರೆ ಮಾತ್ರ ಯಶಸ್ಸು ಸಾಧಿಸಬಲ್ಲ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಹಾಗಂತ ಮಕ್ಕಳಿಂದ ಅಪ್ಪ ಅಮ್ಮನನ್ನು ದೂರ ಮಾಡುವ ಸಂದೇಶ ಈ ಲೇಖನ ಸಾರುವುದಿಲ್ಲ. ಆದರೆ ಮನೆಯಿಂದ ಆಚೆ ಇದ್ದರೆ ಮಾತ್ರ, ಕೆಲವು ರಾಶಿಯವರು ಉದ್ಧಾರವಾಗುತ್ತಾರೆ ಎನ್ನಲಾಗಿದೆ. ಹಾಗಾಗಿ ಅಂಥ ರಾಶಿಯವರ ಬಗ್ಗೆ ನಾವಿಂದು ವಿವರಿಸಲಿದ್ದೇವೆ.
ಸಿಂಹ: ಸಿಂಹ ರಾಶಿಯವರು ನಾಯಕತ್ವದ ಗುಣ ಇರುವವರು. ಎಲ್ಲಾದರೂ ಕೆಲಸಕ್ಕೆ ಸೇರಿದರೇ, ಅಲ್ಲಿ ತಮ್ಮ ಸಾಮ್ರಾಜ್ಯವನ್ನೇ ನಿರ್ಮಿಸುವ ಶಕ್ತಿ ಉಳ್ಳವರು. ಹಾಗಾಗಿ ಇವರು ಮನೆಯಿಂದ ದೂರವಿದ್ದು, ಅಂದರೆ ಅಭಿವೃದ್ಧಿಯಾಗುವ ಕೆಲಸಕ್ಕೆ ಸೇರಲು ನಿರ್ಧರಿಸಿದರೆ, ಜೀವನದಲ್ಲಿ ಯಶಸ್ಸು ನಿಶ್ಚಿತ.
ತುಲಾ: ತುಲಾ ರಾಶಿಯವರು ಯಾವ ಕೆಲಸವನ್ನು ಮಾಡಲೇಬೇಕು ಎಂದು ಹಠ ಹಿಡಿದರೆ, ಅದನ್ನು ಸಂಪೂರ್ಣವಾಗಿ ಮುಗಿಸದೇ ಬಿಡರು. ಅಲ್ಲದೇ, ಹೊಸತನವನ್ನು ಹೆಚ್ಚು ಇಷ್ಟಪಡುವ ಇವರು, ನಾಲ್ಕು ಜನರ ಜೊತೆ ಬೆರೆತಾಗ ಮಾತ್ರ ಯಶಸ್ವಿಯಾಗುತ್ತಾರೆ. ಅಲ್ಲದೇ, ಆಕರ್ಷಕ ನಡೆ ನುಡಿ ಹೊಂದಿರುವ ಇವರು, ಮಾತಿನಿಂದಲೇ ಇತರರನ್ನು ಚಕಿತಗೊಳಿಸುತ್ತಾರೆ. ಪರ ಊರಿಗೆ ಅಥವಾ ಪರದೇಶಕ್ಕೆ ಹೋದಾಗ, ಇವನ್ನು ಜೀವನದಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತಾರೆ.
ಧನು:ಧನು ರಾಶಿಯವರು ಹೆಚ್ಚಿನಂಶ ಮನೆಯಲ್ಲಿ ಇರುವುದೇ ಇಲ್ಲ. ಇವರು ಪರ ಊರಿಗೆ ಅಥವಾ ಪರ ದೇಶಕ್ಕೆ ಕೆಲಸಕ್ಕೆ ಹೋಗದಿದ್ದರೂ, ಇದ್ದ ಊರಿನಲ್ಲೇ ಇದ್ದರೂ, ಮನೆಯಲ್ಲಿ ಹೆಚ್ಚು ಸಮಯ ಇವರ ಕಾಲು ನಿಲ್ಲುವುದಿಲ್ಲ. ಏಕೆಂದರೆ ಇವರು ಪ್ರವಾಸ ಪ್ರಿಯರು. ಅದರಲ್ಲೂ ಸೋಲೋ ಟ್ರಿಪ್ ಹೋಗೋದಂದ್ರೆ ಸದಾ ಕಾಲ ರೆಡಿಯಾಗಿರುವವರು. ಬುದ್ಧಿವಂತರೂ, ಸಲಕ ವಿಷಯದ ಬಗ್ಗೆ ಜ್ಞಾನ ಉಳ್ಳವರಾದ ಧನು ರಾಶಿಯವರು ಎಲ್ಲಿ ಹೋದರೂ, ಅಲ್ಲಿ ಅಡ್ಜಸ್ಟ್ ಆಗುವ ಗುಣವೂ ಉಳ್ಳವರಾಗಿದ್ದಾರೆ.
ಮಕರ: ಮಕರ ರಾಶಿಯವರು ಜೀವನದಲ್ಲಿ ಒಂದು ಗುರಿ ಸಾಧಿಸುವ ನಿರ್ಧಾರ ಮಾಡಿದ್ರೆ, ಆ ಗುರಿ ಮುಟ್ಟುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಆ ಗುರಿ ಮುಟ್ಟಲು, ಊಟ- ನಿದ್ರೆ ಬಿಡಲು ಕೂಡ ಮಕರ ರಾಶಿಯವರು ಸಿದ್ಧರಿರುತ್ತಾರೆ. ಆದರೆ ಹೆಚ್ಚಿನ ಪ್ರೀತಿ, ಕಾಳಜಿ ಸಿಕ್ಕಾಗ ಈ ಗುರಿಯ ಜವಾಬ್ದಾರಿ ಮರೆಯು ಕಾರಣ ಇವರು ಮನೆಯಿಂದ ದೂರವಿದ್ದು, ಗುರಿ ಸಾಧಿಸಿದರೆ ಉತ್ತಮರಾಗಬಹುದು.




