Hubli News: ಕಬ್ಬು ಬೆಳೆಗಾರರ ಹೋರಾಟ ಈಗ ದೆಹಲಿಯ ಅಂಗಳಕ್ಕೆ..!

Hubli News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಬೆಳಗಾವಿಯಿಂದ 35 ರೈತರ ನಿಯೋಗ ದೆಹಲಿಗೆ ಪ್ರಯಾಣ ಬೆಳೆಸಿದೆ..!

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ರೈತರ ನಿಯೋಗ ದೆಹಲಿಗೆ ತೆರಳಿದ್ದು, ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡಲು ಸಜ್ಜಾಗಿದೆ..!

ಕಬ್ಬಿನ ಎಂಎಸ್‌ಪಿ ದರ 60 ರೂಪಾಯಿಗೆ ಹೆಚ್ಚಳ ಮಾಡಬೇಕು.. ಎಥೆನಾಲ್ ಉತ್ಪಾದನೆಯ ಸಂಪೂರ್ಣ ಖರೀದಿಗೆ ಕ್ರಮ ಕೈಗೊಳ್ಳಬೇಕು.. ವಾಣಿಜ್ಯ ಸಕ್ಕರೆಯ ಬೆಲೆಯನ್ನು 100 ರೂಪಾಯಿಗೆ ಹೆಚ್ಚಿಸಬೇಕು.. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು.. ಇವು ರೈತರ ಪ್ರಮುಖ ಬೇಡಿಕೆಗಳಾಗಿವೆ..!

ಇನ್ನೊಂದೆಡೆ, ರಾಜ್ಯದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಕಬ್ಬಿನ ಎಂಎಸ್‌ಪಿ ದರ ಹೆಚ್ಚಳವಾಗಿಲ್ಲ ಎಂಬುದು ರೈತರ ಆರೋಪ.. ಸದ್ಯ ಪ್ರತಿ ಕೆಜಿ ಕಬ್ಬಿಗೆ 31 ರೂಪಾಯಿ ದರವಿದ್ದು, ಇದನ್ನು ಹೆಚ್ಚಿಸಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ..!

ಇಂದೇ ಕೇಂದ್ರ ಸರ್ಕಾರಕ್ಕೆ ರೈತರು ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 13ರಿಂದಲೇ ರಾಜ್ಯದ ಹತ್ತು ಕಡೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದಾರೆ..!

ಹೀಗಾಗಿ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ..? ಗ್ರಾಹಕರ ಹಿತ ಕಾಯಬೇಕೋ, ಕಬ್ಬು ಬೆಳೆಗಾರರ ಹಿತ ಕಾಪಾಡಬೇಕೋ ಎಂಬ ಸವಾಲು ಕೇಂದ್ರ ಸರ್ಕಾರದ ಮುಂದಿದೆ..!

ಇಂದಿನ ಸಭೆಯ ಮೇಲೆ ಕಬ್ಬು ಬೆಳೆಗಾರರ ಚಿತ್ತ ನೆಟ್ಟಿದ್ದು, ಸಭೆಯಲ್ಲಿ ಹೊರಬೀಳುವ ನಿರ್ಧಾರ ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸಲಿದೆ..!

About The Author